alex Certify BMW ಕಾರಿನಿಂದ ಇನ್​ಸ್ಪೆಕ್ಟರ್​​ಗೆ ಡಿಕ್ಕಿ ಹೊಡೆಸಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BMW ಕಾರಿನಿಂದ ಇನ್​ಸ್ಪೆಕ್ಟರ್​​ಗೆ ಡಿಕ್ಕಿ ಹೊಡೆಸಿದ ಭೂಪ..!

ಹೈದರಾಬಾದ್​​ನ ಟ್ಯಾಂಕ್​ ಬಂಡ್​ ರಸ್ತೆಯಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಬಿಎಂಡಬ್ಲು ಕಾರು ಡಿಕ್ಕಿ ಹೊಡೆದ ಘಟನೆಯು ವರದಿಯಾಗಿದೆ. ಮುಶೀರಾಬಾದ್​ ಇನ್​ಸ್ಪೆಕ್ಟರ್​​​ ಇ. ಜಹಂಗೀರ್​​ ಟ್ಯಾಂಕ್​ ಬಂಡ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಿಕಂದರಾಬಾದ್​​ನ ರಾಣಿ ಗುಂಜ್​​ನಿಂದ ಬರುತ್ತಿದ್ದ ಬಿಎಂಡಬ್ಲು ಕಾರು ಇನ್​ಸ್ಪೆಕ್ಟರ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇನ್​ಸ್ಪೆಕ್ಟರ್​ ಜಹಂಗೀರ್​ ಗಾಯಗೊಂಡಿದ್ದಾರೆ.

ಇನ್​ಸ್ಪೆಕ್ಟರ್​ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಜಹಂಗೀರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಜಹಾಂಗೀರ್​​ ತಮ್ಮ ಕಾರಿನಿಂದ ಇಳಿದು ಟ್ಯಾಂಕ್​ ಬಂಡ್​ ರಸ್ತೆಯಲ್ಲಿದ್ದ ಗುಂಪು ಚದುರಿಸಲು ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ.

ಕಾರು ಚಲಾಯಿಸುತ್ತಿದ್ದವನನ್ನು ಮಿರ್​ ಒಸಾಮನ್​ ಅಲಿ ಖಾನ್​ ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್​ನ ಆಸಿಫ್​ ನಗರದಲ್ಲಿ ಸೆಕೆಂಡ್​ ಹ್ಯಾಂಡ್​ ಕಾರುಗಳ ಡೀಲರ್​ ಆಗಿದ್ದಾನೆ. ಪೊಲೀಸ್​ ಬರುತ್ತಿದ್ದುದನ್ನು ನಾನು ಗಮನಿಸಿರಲಿಲ್ಲ ಎಂದು ಮಿರ್​ ಒಸಾಮನ್​ ಹೇಳಿದ್ದಾನೆ.

ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್​ 337 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...