alex Certify ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಹಿರಿಯ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಹಿರಿಯ ನಟಿ

ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ತಮ್ಮ ಆತ್ಮಚರಿತ್ರೆ ‘ಸಚ್​ ಕಹೂ ತೋ’(ಸತ್ಯ ಹೇಳಬೇಕು ಅಂದರೆ…..)ಯನ್ನು ರಿಲೀಸ್​ ಮಾಡಿದ್ದು, ಈ ಪುಸ್ತಕದಲ್ಲಿ ನಟಿ ನೀನಾ ಬಾಲ್ಯದಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬರೆದುಕೊಂಡಿದ್ದಾರೆ.

ಹದಿಹರೆಯದಲ್ಲಿ ತಮ್ಮ ಮೇಲೆ ವೈದ್ಯ ಹಾಗೂ ಟೈಲರ್​ ಲೈಂಗಿಕ ದೌರ್ಜನ್ಯ ನಡೆಸಿದ್ದರೂ ತಾವು ತಮ್ಮ ತಾಯಿಯ ಬಳಿ ಹೇಳಿಕೊಂಡಿರಲಿಲ್ಲ ಎಂದು ಬರೆದಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ನಟಿ ಬಾಲ್ಯದ ದಿನಗಳ ಸಿಹಿ ಹಾಗೂ ಕಹಿ ಘಟನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ

ಕಣ್ಣಿನ ಆಸ್ಪತ್ರೆಗೆ ಸಹೋದರನ ಜೊತೆಯಲ್ಲಿ ನೀನಾ ತೆರಳಿದ್ದರು. ಈ ವೇಳೆ ವೈದ್ಯ ನೀನಾರನ್ನು ಮಾತ್ರ ಒಳಗೆ ಕರೆದು ಸಹೋದರನಿಗೆ ಹೊರಗೆ ಕೂರುವಂತೆ ಹೇಳಿದ್ದರು. ನೀನಾ ಕಣ್ಣಿನ ಪರೀಕ್ಷೆ ಮಾಡೋದರ ಜೊತೆಯಲ್ಲಿ ವೈದ್ಯ ಕಣ್ಣಿಗೆ ಸಂಬಂಧವೇ ಇಲ್ಲದ ಅಂಗಗಳನ್ನೂ ಮುಟ್ಟಿದ್ದರಂತೆ..! ಈ ಘಟನೆಯಿಂದ ಹೆದರಿ ಹೋಗಿದ್ದ ನೀನಾ ಮನೆಯ ಮೂಲೆಯಲ್ಲಿ ಕುಳಿತು ಕಣ್ಣೀರು ಸುರಿಸಿದ್ದರಂತೆ. ಆದರೆ ಈ ಯಾವ ಘಟನೆಯ ಬಗ್ಗೆ ತಾಯಿಯ ಬಳಿ ಹೇಳಿಕೊಳ್ಳಲು ನನಗೆ ಧೈರ್ಯ ಸಾಲಲಿಲ್ಲ. ತಾಯಿ ನನ್ನದೇ ತಪ್ಪಿದೆ, ನೀನೇ ವೈದ್ಯರಿಗೆ ಪ್ರಚೋದನೆ ನೀಡಿದೆ ಎಂದು ಹೇಳಿದರೆ ಎಂಬ ಭಯ ನನ್ನನ್ನು ಕಾಡುತ್ತಿತ್ತು. ವೈದ್ಯರ ಬಳಿಯಲ್ಲಿ ನನಗೆ ಅನೇಕ ಬಾರಿ ಈ ರೀತಿಯ ಅನುಭವವಾಗಿದೆ ಎಂದು ನೀನಾ ಬರೆದುಕೊಂಡಿದ್ದಾರೆ.

ಅಚ್ಚರಿಗೊಳಿಸುತ್ತೆ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣದ ಭದ್ರತೆಗೆ ಬಂದಿರುವ ಸಿಬ್ಬಂದಿ…!

ಅದೇ ರೀತಿ ಟೈಲರ್​ ಬಳಿಯಲ್ಲೂ ತಮಗೆ ಕೆಟ್ಟ ಅನುಭವವಾಗಿದೆ ಎಂದು ನೀನಾ ಬರೆದಿದ್ದಾರೆ. ನನ್ನ ಅಳತೆಯನ್ನು ತೆಗೆದುಕೊಳ್ಳುವಾಗ ಟೈಲರ್​ ಅಸಭ್ಯವಾಗಿ ಮಾತನಾಡಿದ್ದನು. ಈ ಘಟನೆಯ ಬಳಿಕವೂ ನನಗೆ ಇಷ್ಟವಿಲ್ಲದಿದ್ದರೂ ಇದೇ ಟೈಲರ್​ ಬಳಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದವು. ನನಗೆ ಆಗ ನನ್ನ ಬಳಿ ಬೇರೆ ಆಯ್ಕೆಗಳಿಲ್ಲ ಎಂದೆನಿಸುತ್ತಿತ್ತು. ನಾನು ತಾಯಿಯ ಹತ್ತಿರ ಟೇಲರ್​​ ಬಳಿ ಹೋಗುವುದಿಲ್ಲ ಎಂದು ಹೇಳಿದರೆ ಕಾರಣ ಕೇಳುತ್ತಿದ್ದರು. ಆಗ ನನಗೆ ಕಾರಣ ನೀಡಲು ಸಾಧ್ಯವೇ ಇಲ್ಲ ಎಂದೆನಿಸುತ್ತಿತ್ತು ಎಂದು ನೀನಾ ಬರೆದಿದ್ದಾರೆ.

ಗುರುತಿಸಬಲ್ಲಿರಾ ʼಬಿಗ್‌ ಬಿʼ ಫೋಟೋದಲ್ಲಾಗಿರುವ ಈ ಎಡವಟ್ಟು…?

16ನೇ ವಯಸ್ಸಿನಲ್ಲಿ ತಮ್ಮ ಸ್ನೇಹಿತೆಯ ಸಹೋದರ ಆಗಷ್ಟೇ ಮದುವೆಯಾಗಿದ್ದರೂ ಸಹ ಆತ ನನ್ನೊಂದಿಗೆ ಬೇರೆಯದ್ದೇ ಸಂಬಂಧ ಹೊಂದಲು ಬಯಸಿದ್ದ. ಆದರೆ ನಾನು ಹೇಗೋ ಆತ ಹಾಗೂ ಆತನ ಮನೆಯ ಹೆಸರು ಹಾಳಾಗದಂತೆ ಇದರಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದೆ ಎಂದು ವಿವರಿಸಿದ್ದಾರೆ.

ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ನನ್ನಂತೆ ಅನೇಕ ಯುವತಿಯರು ಇಂತದ್ದೇ ಅನೇಕ ಘಟನೆಗಳನ್ನು ಎದುರಿಸಿರುತ್ತಾರೆ. ಆದರೆ ಈ ಬಗ್ಗೆ ಪೋಷಕರ ಬಳಿ ಹೇಳಿಕೊಳ್ಳುವ ಧೈರ್ಯ ಮಾಡುವುದಿಲ್ಲ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...