alex Certify ಅಚ್ಚರಿಗೊಳಿಸುತ್ತೆ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣದ ಭದ್ರತೆಗೆ ಬಂದಿರುವ ಸಿಬ್ಬಂದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣದ ಭದ್ರತೆಗೆ ಬಂದಿರುವ ಸಿಬ್ಬಂದಿ…!

ಯೂರೋಪ್‌ನ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದಾದ ಆಮ್ಸ್‌ಸ್ಟರ್‌ಡ್ಯಾಂನ ಶಿಪೋಲ್ ವಿಮಾನ ನಿಲ್ದಾಣಕ್ಕೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಸಹಜ ಸವಾಲೊಂದು ಎದುರಾಗಿದೆ.

ವಿಮಾನ ನಿಲ್ದಾಣವು 10.3 ಚದರ ಮೈಲಿ ವಿಸ್ತೀರ್ಣದಲ್ಲಿ ಹಬ್ಬಿದ್ದು, ಆಗಾಗ ನಿಂತ ನೀರಿನಿಂದ ಭಾರೀ ಸಮಸ್ಯೆ ಎದುರಿಸುತ್ತಲೇ ಇರುತ್ತದೆ. ಈ ಪ್ರದೇಶದಲ್ಲಿ ಚೆನ್ನಾಗಿ ಬೆಳೆ ಬೆಳೆಯುವ ವಾತಾವರಣವಿದ್ದು, ಪಕ್ಷಿಗಳನ್ನು ಸೆಳೆಯುತ್ತದೆ.

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ

ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಪಕ್ಷಿಗಳು ವಿಪರೀತ ಎನ್ನುವಷ್ಟು ಹೆಚ್ಚಾಗಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ಅಲ್ಲಿಂದ ನಿರ್ಗಮಿಸುವ ವಿಮಾನಗಳ ಓಡಾಟಕ್ಕೇ ಸವಾಲಾಗಿಬಿಟ್ಟಿವೆ ಈ ಪಕ್ಷಿಗಳು. ರನ್‌ವೇಗಳ ನಡುವೆ ಬಾತುಕೋಳಿಗಳ ಗುಂಪೊಂದು ಅಡ್ಡಾಡುವುದನ್ನು ಸಹ ನೋಡಬಹುದಾಗಿದೆ.

ಈ ಪಕ್ಷಿಗಳ ಅಡ್ಡಾಟವನ್ನು ತಹಬದಿಗೆ ತರಲೆಂದು ವಿಶಿಷ್ಟವಾದ ಪ್ರಯತ್ನಕ್ಕೆ ಕೈ ಹಾಕಿರುವ ವಿಮಾನ ನಿಲ್ದಾಣದ ಆಡಳಿತ ವರ್ಗ ಹಂದಿಗಳು ವಿಶೇಷ ತಂಡವೊಂದನ್ನು ರನ್‌ವೇಗಳ ಸುತ್ತ ಗಸ್ತು ತಿರುಗಲು ನೇಮಕ ಮಾಡಿಕೊಂಡಿದೆ. ಈ ಹಂದಿಗಳ ಸಮೂಹವು ರನ್‌ವೇ ಸುತ್ತ ಪಕ್ಷಿಗಳು ಬಾರದಂತೆ ನೋಡಿಕೊಳ್ಳುತ್ತಿದೆ.

ಬರೋಬ್ಬರಿ 9 ತಿಂಗಳ ಲಾಕ್‌ಡೌನ್‌ ಬಳಿಕ ಸಹಜ ಸ್ಥಿತಿಗೆ ಮರಳುತ್ತಿದೆ ಈ ನಗರ….!

ಶಿಫೋಲ್ ವಿಮಾನ ನಿಲ್ದಾಣದ ಡ್ಯೂಟಿಗೆಂದು 20 ಹಂದಿಗಳ ತಂಡವನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿಮಾನದ ಆರು ರನ್‌ವೇಗಳ ಭದ್ರತೆಗಾಗಿ ಈ ಹಂದಿಗಳನ್ನು ನೇಮಕ ಮಾಡಲಾಗಿದೆ.

ಪ್ರಯಾಣಿಕರ ಆಗಮನ/ನಿರ್ಗಮನದ ಲೆಕ್ಕಾಚಾರದಲ್ಲಿ ಯೂರೋಪ್‌ನ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣವಾದ ಶಿಫೋಲಿ ಒಟ್ಟಾರೆ ವಿಮಾನಗಳ ಸಂಚಾರದಲ್ಲಿ ಖಂಡದ ಅತ್ಯಂತ ದೊಡ್ಡ ನಿಲ್ದಾಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...