alex Certify ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ವಂಚನೆ ಹಾಗೂ ಮಾನಸಿಕ ಕಿರುಕುಳದ ಆರೋಪದಲ್ಲಿ ನಟಿ ಶೆರ್ಲಿನ್ ಚೋಪ್ರಾ ದೂರು ದಾಖಲಿಸಿದ್ದಾರೆ.

ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆಪಾದನೆ ಮಾಡಿರುವ ಚೋಪ್ರಾ, ವಂಚನೆ ಹಾಗೂ ಕ್ರಿಮಿನಲ್ ನಡತೆಯ ದೂರು ನೀಡಿದ್ದಾರೆ. “ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳ, ವಂಚನೆ ಹಾಗೂ ಕ್ರಿಮಿನಲ್ ನಡತೆಯ ಸಂಬಂಧ ಎಫ್‌ಐಆರ್‌ ದಾಖಲಿಸಲು ನಾನು ದೂರು ಕೊಟ್ಟಿದ್ದೇನೆ,” ಎಂದು ಚೋಪ್ರಾ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.

ಪತ್ನಿಯ ಬಿಕಿನಿ ಫೋಟೋ ಸೆರೆ ಹಿಡಿದ ಆಯುಷ್ಮಾನ್ ಖುರಾನಾ

ಅಕ್ಟೋಬರ್‌ 14ರಂದು ಮಾಧ್ಯಮ ಗೋಷ್ಠಿ ಕರೆದಿದ್ದ ನಟಿ, ಕುಂದ್ರಾ ಹಾಗೂ ಶೆಟ್ಟಿ ವಿರುದ್ಧ ಬಹಿರಂಗ ಪಡಿಸಲು ತಮ್ಮಲ್ಲಿ ಅನೇಕ ಶಾಕಿಂಗ್ ಸಂಗತಿಗಳು ಇವೆ ಎಂದಿದ್ದಾರೆ.

ಇದೇ ವೇಳೆ, ಮಾಧ್ಯಮ ಸುದ್ಧಿಗೋಷ್ಠಿಯ ವಿಚಾರವಾಗಿ ಮಾತನಾಡಿದ ಶಿಲ್ಪಾ ಶೆಟ್ಟಿ ಹಾಗೂ ಕುಂದ್ರಾ ಪರ ವಕೀಲರು, ಶೆರ್ಲಿನ್ ಹೀಗೆ ಆಧಾರರಹಿತ ಆಪಾದನೆಗಳನ್ನು ಮಾಡುತ್ತಿದ್ದರೆ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೂಡಿಕೆ ದುಪ್ಪಟ್ಟಾಗುವ ಅವಧಿ ಲೆಕ್ಕ ಹಾಕುತ್ತಿದ್ದೀರಾ..? ಇಲ್ಲಿದೆ ರೂಲ್‌ 72 ರ ಕುರಿತ ಮಾಹಿತಿ

ನೀಲಿ ಚಿತ್ರಗಳ ನಿರ್ಮಾಣ ಹಾಗೂ ವಿತರಣೆ ಸಂಬಂಧ ಬಂಧಕ್ಕೊಳಗಾಗಿದ್ದ ಕುಂದ್ರಾ ಸೆಪ್ಟೆಂಬರ್‌ 21ರಂದು ಮುಂಬಯಿಯ ಆರ್ಥರ್‌ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

46 ವರ್ಷ ವಯಸ್ಸಿನ ಉದ್ಯಮಿ ಎರಡು ತಿಂಗಳ ಹಿಂದೆ ನೀಲಿ ಚಿತ್ರಗಳ ನಿರ್ಮಾಣದ ಪ್ರಕರಣದಲ್ಲಿ ಬಂಧಿತರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...