alex Certify ಬಾಲಕರು ಸೈಕಲ್ ಸವಾರಿ ಮಾಡುತ್ತಿರುವ ಉಲ್ಲಾಸದ ವಿಡಿಯೋ ಹಂಚಿಕೊಂಡ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕರು ಸೈಕಲ್ ಸವಾರಿ ಮಾಡುತ್ತಿರುವ ಉಲ್ಲಾಸದ ವಿಡಿಯೋ ಹಂಚಿಕೊಂಡ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಸದಾ ಉಲ್ಲಾಸದ, ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಟ್ವಿಟ್ಟರ್ ನಲ್ಲಿ 9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇದೀಗ, ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಇಬ್ಬರು ದೇಸಿ ಬಾಲಕರು ಒಟ್ಟಿಗೆ ಬೈಸಿಕಲ್ ಸವಾರಿ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಭಾರಿ ಸದ್ದು ಮಾಡಿದೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಕೂಡ ಸಹಯೋಗ ಮತ್ತು ಟೀಮ್‌ವರ್ಕ್‌ನ ಸದ್ಗುಣಗಳನ್ನು ತಿಳಿಸಲು ಇದಕ್ಕಿಂತ ಉತ್ತಮ ವಿಡಿಯೋವನ್ನು ಹೊಂದಿಲ್ಲ ಎಂದು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನ ಜನಪ್ರಿಯ ಸಿನಿಮಾವಾದ ಶೋಲೆಯ ಪ್ರಸಿದ್ಧ ಹಾಡು ‘ಯೇ ದೋಸ್ತಿ ಹಮ್ ನಹಿ ತೋಡೆಂಗೆ’ ಹಾಡನ್ನು ವಿಡಿಯೋದ ಹಿನ್ನೆಲೆಯಲ್ಲಿ ಪ್ಲೇ ಮಾಡಲಾಗಿದೆ. ಇಬ್ಬರು ಮಕ್ಕಳು ರಸ್ತೆಯ ಮೇಲೆ ಸೈಕಲ್ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಬಾಲಕರು ಒಟ್ಟಿಗೆ ಸವಾರಿ ಮಾಡಲಿಲ್ಲ. ಇಬ್ಬರೂ ಒಟ್ಟಿಗೆ ಪೆಡಲ್ ಮಾಡುವ ಮೂಲಕ ಸೈಕಲ್ ವೇಗದಲ್ಲಿ ಚಲಿಸಲು ಸಹಾಯ ಮಾಡಿದ್ದಾರೆ. ಇಬ್ಬರೂ ತಲಾ ಒಂದು ಪೆಡಲ್ ಮೇಲೆ ನಿಂತು, ಸೈಕಲ್ ತುಳಿದಿರುವುದು ವಿಶೇಷ. ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದು,  ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ಗಳನ್ನು ತುಂಬಿದ್ದಾರೆ.

— anand mahindra (@anandmahindra) April 23, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...