alex Certify ʼಬಾಡಿಲೋಷನ್ʼ ಅನ್ನು ಈ ಸಮಯದಲ್ಲಿ ಹಚ್ಚಿದರೆ ಕಾಡಲ್ಲ ಚರ್ಮದ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾಡಿಲೋಷನ್ʼ ಅನ್ನು ಈ ಸಮಯದಲ್ಲಿ ಹಚ್ಚಿದರೆ ಕಾಡಲ್ಲ ಚರ್ಮದ ಸಮಸ್ಯೆ

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಮಯದಲ್ಲಿ ಚರ್ಮದ ಮೇಲೆ ತುರಿಕೆ, ಒಣಚರ್ಮ, ದದ್ದುಗಳು ಕಂಡುಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಚರ್ಮವನ್ನು ತೇವಗೊಳಿಸಲು ಬಾಡಿಲೋಷನ್ ಅನ್ನು ಹಚ್ಚುತ್ತಾರೆ. ಆದರೆ ಚರ್ಮಕ್ಕೆ ಬಾಡಿಲೋಷನ್ ಹಚ್ಚುವಾಗ ಕೆಲವು ವಿಚಾರಗಳು ತಿಳಿದಿರಲಿ. ಇಲ್ಲವಾದರೆ ಚರ್ಮದ ಸಮಸ್ಯೆಗಳು ಕಾಡುತ್ತವೆ.

ಬೆಳಿಗ್ಗೆ ಚರ್ಮವನ್ನು ತೇವಗೊಳಿಸುವುದರಿಂದ ಚರ್ಮವನ್ನು ಹಾನಿಕಾರಕ ರಾಸಾಯನಿಕಗಳು ಮತ್ತು ಮಾಲಿನ್ಯಗಳಿಂದ ರಕ್ಷಿಸಬಹುದು. ಹಾಗಾಗಿ ನಿಯಮಿತವಾಗಿ ಬಾಡಿಲೋಷನ್ ಅನ್ನು ಹಚ್ಚಿ.
ಸ್ನಾನ, ಶೇವಿಂಗ್, ಕೈಗಳನ್ನು ತೊಳೆದ ಬಳಿಕ ಚರ್ಮಕ್ಕೆ ಮಾಯಿಶ್ವರೈಸರ್ ಹಚ್ಚಿ. ಇದು ಚರ್ಮವನ್ನು ಇಡೀ ದಿನ ತೇವವಾಗಿಡುತ್ತದೆ ಮತ್ತು ಒಣ ತ್ವಚೆ ಸಮಸ್ಯೆ ಕಾಡುವುದಿಲ್ಲ.

ಪ್ರಯಾಣದ ಸಮಯದಲ್ಲಿ ಗಾಳಿಯಿಂದಾಗಿ ನಿಮ್ಮ ಚರ್ಮವು ಹೆಚ್ಚು ಡ್ರೈ ಆಗುತ್ತದೆ. ಹಾಗಾಗಿ ಪ್ರಯಾಣ ಮಾಡುವಾಗ ಬಾಡಿಲೋಷನ್ ಅನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ. ಚರ್ಮ ಒಣಗಿದಾಗ ಬಾಡಿಲೋಷನ್ ಹಚ್ಚಿ.

ತಜ್ಞರ ಪ್ರಕಾರ ರಾತ್ರಿಯ ಸಮಯದಲ್ಲಿ ಚರ್ಮವನ್ನು ತೇವಗೊಳಿಸುವುದು ಬಹಳ ಮುಖ್ಯ. ಯಾಕೆಂದರೆ ರಾತ್ರಿಯ ಸಮಯದಲ್ಲಿ ಚರ್ಮದಲ್ಲಿ ನೀರಿನಾಂಶ ಕಡಿಮೆಯಾಗಿರುತ್ತದೆ. ಹಾಗಾಗಿ ಮಲಗುವ ಮುನ್ನ ಚರ್ಮಕ್ಕೆ ಬಾಡಿಲೋಷನ್ ಹಚ್ಚಿ.

ಚರ್ಮವನ್ನು ಎಕ್ಸ್ ಪೋಲಿಯೇಟಿಂಗ್ ಮಾಡಿದ ಬಳಿಕ ಬಾಡಿ ಲೋಷನ್ ಹಚ್ಚುವುದನ್ನು ಮರೆಯಬೇಡಿ. ಎಕ್ಸ್ ಪೋಲಿಯೇಟಿಂಗ್ ಸತ್ತ ಚರ್ಮಕೋಶಗಳನ್ನು ತೆಗೆದುಹಾಕಿ ಹೊಸ ಚರ್ಮ ಹುಟ್ಟುವಂತೆ ಮಾಡುತ್ತದೆ. ಬಾಡಿ ಲೋಷನ್ ಹೊಸ ಚರ್ಮವನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

ವ್ಯಾಯಾಮದ ಸಮಯ ಮತ್ತು ನಂತರ ದೇಹ ತುಂಬಾ ಬೆವರುತ್ತದೆ. ಆಗ ಚರ್ಮ ಬೇಗನೆ ಒಣಗುತ್ತದೆ. ಹಾಗಾಗಿ ವ್ಯಾಯಾಮ ಮಾಡುವ ಮುನ್ನ ಚರ್ಮಕ್ಕೆ ಬಾಡಿಲೋಷನ್ ಹಚ್ಚಿದರೆ ತುಂಬಾ ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...