alex Certify ಬರೋಬ್ಬರಿ 6 ತಿಂಗಳ ಹೋರಾಟದ ಬಳಿಕ ಕೊರೊನಾ ಗೆದ್ದ ಅರಬ್​ ರಾಷ್ಟ್ರದ ಭಾರತೀಯ ಮುಂಚೂಣಿ ಸಿಬ್ಬಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 6 ತಿಂಗಳ ಹೋರಾಟದ ಬಳಿಕ ಕೊರೊನಾ ಗೆದ್ದ ಅರಬ್​ ರಾಷ್ಟ್ರದ ಭಾರತೀಯ ಮುಂಚೂಣಿ ಸಿಬ್ಬಂದಿ….!

ಅರಬ್​ ರಾಷ್ಟ್ರದಲ್ಲಿದ್ದ 38 ವರ್ಷದ ಭಾರತೀಯ ಮುಂಚೂಣಿ ಸಿಬ್ಬಂದಿ ಕೊನೆಗೂ ಕೋವಿಡ್​ 19 ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾಗಿದ್ದ ಇವರಿಗೆ ಶ್ವಾಸಕೋಶವು ಗಂಭೀರವಾಗಿ ಹಾನಿಗೊಳಗಾಗಿತ್ತು. ಇದರಿಂದಾಗಿ ಬರೋಬ್ಬರಿ ಆರು ತಿಂಗಳುಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದೇ ಇವರು ಕೊನೆಗೂ ಕೋವಿಡ್​ ವಿರುದ್ಧ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟಿ ಟೆಕ್ನಿಷಿಯನ್​ ಆಗಿದ್ದ ಅರುಣ್​ ಕುಮಾರ್​ ಎಂ. ನಾಯರ್ ಕೋವಿಡ್​ ಸೋಂಕಿನ ವಿರುದ್ಧ ಬರೋಬ್ಬರಿ ಅರ್ಧ ವರ್ಷಗಳ ಕಾಲ ಸೆಣೆಸಾಟ ನಡೆಸಿ ಯಶಸ್ವಿಯಾಗಿದ್ದಾರೆ. ಕೃತಕ ಶ್ವಾಸಕೋಶದ ಸಹಾಯದಿಂದ ಉಸಿರಾಡುತ್ತಿದ್ದ ಅರುಣ್​ ಕುಮಾರ್​ ಶ್ವಾಸಕೋಶವು ಇದೀಗ ಚೇತರಿಕೆ ಕಂಡಿದೆ.
ಈ ಅವಧಿಯಲ್ಲಿ ಅರುಣ್​ ಕುಮಾರ್​ ನಾಯರ್​ ಹೃದಯ ಸ್ತಂಭನ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅರುಣ್​ ಕುಮಾರ್​ ಟ್ರಾಕಿಯೋಸ್ಟೊಮಿ ಹಾಗೂ ಬ್ರಾಂಕೋಸ್ಕೋಪಿಯಂತಹ ಹಲವಾರು ಚಿಕಿತ್ಸೆಗಳಿಗೆ ಒಳಗಾಗಿದ್ದರು.

ದೇಶದ ಆರೋಗ್ಯವನ್ನು ರಕ್ಷಿಸಲು ಹೋಗಿ ತಾನೇ ಹಾಸಿಗೆ ಹಿಡಿದ ಅವರ ಸೇವಾ ಮನೋಭಾವವನ್ನು ಗುರುತಿಸಿ ಬಹುರಾಷ್ಟ್ರೀಯ ಆರೋಗ್ಯ ಸೇವಾ ಗುಂಪಾದ ವಿಪಿಎಸ್​ ಹೆಲ್ತ್​ ಕೇರ್​​ ಅರುಣ್​ ಕುಮಾರ್​ರಿಗೆ 50 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಮಾಡಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅರುಣ್​ ಕುಮಾರ್​ ನಾಯರ್​, ನನಗೆ ಯಾವುದೂ ನೆನಪಿಲ್ಲ. ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ ಎಂದಷ್ಟೇ ಹೇಳಬಲ್ಲೆ ಎಂದು ಹೇಳಿದ್ದಾರೆ.

ನಾಯರ್​ ಕೇರಳ ಮೂಲದವರಾಗಿದ್ದಾರೆ. ಕೆಲ ಸಮಯದ ಹಿಂದಷ್ಟೇ ಇವರನ್ನು ಆಸ್ಪತ್ರೆಯ ಜನರಲ್​ ರೂಮ್​ನಲ್ಲಿ ಇರಿಸಲಾಗಿತ್ತು. ಅದಕ್ಕೂ ಮೊದಲು ಐದು ತಿಂಗಳುಗಳ ಕಾಲ ನಾಯರ್​​ ಐಸಿಯುವಿನಲ್ಲಿ ಲೈಫ್​ ಸಪೋರ್ಟಿಂಗ್​ ಸಿಸ್ಟಂನಲ್ಲಿಯೇ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...