alex Certify ಫ್ಲೈಟ್‌ ನಲ್ಲಿ ವಿಂಡೋ ಸೀಟ್ ತಲುಪಲು ಈ ಯುವತಿ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಟ್‌ ನಲ್ಲಿ ವಿಂಡೋ ಸೀಟ್ ತಲುಪಲು ಈ ಯುವತಿ ಮಾಡಿದ್ದೇನು ಗೊತ್ತಾ..?

ಐಶಾರಾಮಿ ಫ್ಲೈಟ್‌ನಲ್ಲಿ ಓಡಾಡಬೇಕು ಅನ್ನೋದು ತುಂಬಾ ಜನರ ಕನಸು. ಬಸ್, ರೈಲಿನಂತೆ ಅಲ್ಲಿ ನೂಕು ನುಗ್ಗಲಿರೋಲ್ಲ. ಗಗನಸಖಿಯರು ಕೂತಲ್ಲೇ, ಬಂದು ಊಟ, ತಿಂಡಿ ಕೊಡ್ತಾರೆ. ಮೋಡಗಳ ನಡುವೆ ವಿಮಾನ ತೇಲ್ತಾ ಹೋಗ್ತಿರೋದನ್ನ ನೋಡೋದೆ ಒಂದು ಖುಷಿ ಅಂತ ಎಷ್ಟೋ ಜನರು ಅಂದುಕೊಂಡಿರ್ತಾರೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋ ಒಂದು, ವಿಮಾನದಲ್ಲಿ ಪ್ರಯಾಣಿಕರು ಅನುಭವಿಸೋ ಸಮಸ್ಯೆ ಹೇಗಿರುತ್ತೆ ಅನ್ನೋದು ತೋರಿಸ್ತಿದೆ.

ಈ ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ಸೀಟ್ ತನಕ ತಲಪುವುದಕ್ಕಾಗಿ ಹೇಗೆ ಕಸರತ್ತು ಮಾಡ್ತಿದ್ದಾಳೆ ನೋಡಿ. ಕಿಟಕಿ ಪಕ್ಕದಲ್ಲಿ ಇರುವ ಆಕೆಯ ಸೀಟಿನ ತನಕ ತಲುಪಲು ಆಕೆ ಮಾಡ್ತಿರೋ ಸರ್ಕಸ್ ಹೇಗಿದೆ ಗೊತ್ತಾ ? ಅಕ್ಕ-ಪಕ್ಕದಲ್ಲಿದ್ದವರನ್ನ ಸರಿಸಿ ಆಕೆ ಆ ಸೀಟಿನ ತನಕ ಹೋಗಬೇಕಾಗಿತ್ತು. ಆದರೆ ಅಲ್ಲಿ ಕಾಲಿಡಲು ಜಾಗವೇ ಇರಲಿಲ್ಲ. ಆದ್ದರಿಂದ ಕೂತ ಪ್ರಯಾಣಿಕರ ನಡುವೆಯೇ ಕಾಲಿಟ್ಟು ತನ್ನ ಸೀಟಿನ ತನಕ ಹೋಗಿ ಕುಳಿತುಕೊಳ್ಳುತ್ತಾಳೆ. ಅಲ್ಲೇ ಇದ್ದ ಸಹಪ್ರಯಾಣಿಕ ಬ್ರೈಂಡನ್ ಈ ದೃಶ್ಯವನ್ನ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿರೋ ಬ್ರೈಂಡನ್ “ ಈ ವಿಡಿಯೋ ನೋಡ್ತಿದ್ರೆ, ಆಕೆ ಅಲ್ಲಿ ವೃದ್ಧರು ಇದ್ದಾರೆ ಅನ್ನೊದನ್ನೂ ಗಮನಿಸದೇ ಅವರ ಮೇಲೆಯೇ ಹತ್ತಿ ಹೋಗುತ್ತಿದ್ದಾಳೆ. ಬಹುಶಃ ಅಲ್ಲಿ ಕುಳಿವರಿಗೆ ಕೇಳಿದ್ದರೆ ಅವರು, ಆಕೆಯ ಸೀಟ್ ತನಕ ಹೋಗುವುದಕ್ಕೆ ಜಾಗ ಬಿಟ್ಟುಕೊಡುವುರೋ ಏನೋ, ಆದರೆ ಆಕೆ ನೆಪಮಾತ್ರಕ್ಕೂ ಹಾಗೆ ಕೇಳದೇ ಒಮ್ಮಿಂದೊಮ್ಮೆಲೇ ಅವರ ಮೇಲೆಯೇ ಹತ್ತಿ ಹೋಗಿ ತನ್ನ ಸೀಟಿನ ಮೇಲೆ ಕುಳಿತು ಏಳು ಗಂಟೆ ಪ್ರಯಾಣ ಮಾಡಿದ್ದಾಳೆ“ ಎಂದಿದ್ದಾರೆ.

ಈ ವಿಡಿಯೋ ಶೇರ್ ಮಾಡಿದ್ದ ತಕ್ಷಣ ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ. ಕೆಲವರ ಪ್ರಕಾರ ಬೇರೆಯವರಿಗೆ ತೊಂದರೆ ಕೊಡದೆ ತಮ್ಮ ತಮ್ಮ ಸೀಟಿನ ತನಕ ತಲಪುವ ಸುಲಭ ಮಾರ್ಗ ಇದು ಎಂದು ಹೇಳಿದ್ಧಾರೆ. ಇನ್ನೂ ಕೆಲವರು ಮಹಿಳೆ ಹೀಗೆ ಬೇರೆಯವರ ಮೇಲೆ ಕಾಲಿಟ್ಟು ಹೋಗಿರುವುದು ಅನಾಗರಿಕತೆ ಅಂತ ಬೈದಿದ್ದಾರೆ. ಅದರಲ್ಲೂ ಆಕೆ ಟಾಯ್ಲೆಟ್‌ಗೆ ಹೋಗಿ ಬಂದಿರಬಹುದು. ಅದೇ ಕಾಲನ್ನ ಬೇರೆಯವರ ಮೇಲೆ ಇಟ್ಟಿದ್ದು ಸರಿಯಾ ಅನ್ನೋದು ಕೆಲವರ ಪ್ರಶ್ನೆಯಾಗಿದೆ.

ಇನ್ನೂ ಒಬ್ಬರ ವಾದ ಏನಂದರೆ, ಆಕೆ ನಡೆಯಲು ಅಶಕ್ತಳಾಗಿದ್ದಳಾ? ಅಲ್ಲಿ ಯಾರೂ ಕೇಳುವವರೇ ಇರಲಿಲ್ಲವಾ? ಯಾಕೆ ಯಾರೂ ಆಕೆ ಹಾಗೆ ಹೋಗುತ್ತಿರುವಾಗ ತಡೆಯಲಿಲ್ಲ ಅಂತ ವಿಮಾನ ಸಿಬ್ಬಂದಿಯವರಿಗೆ ಪ್ರಶ್ನೆ ಮಾಡಿದ್ದಾರೆ. ಹೀಗೆ ನಾನಾ ಚಿತ್ರ-ವಿಚಿತ್ರ ಕಾಮೆಂಟ್‌ಗಳ ಒಂದೊಂದಾಗಿ ಬರ್ತಾನೇ ಇವೆ. ಈ ವಿಡಿಯೋ ನೋಡಿರೋ ಕಾಮನ್‌ಮ್ಯಾನ್‌ ಮಾತ್ರ ವಿಮಾನಗಳಲ್ಲಿ ಪ್ರಯಾಣ ಮಾಡುವಾಗ ಇಂತಹ ಸಮಸ್ಯೆಗಳನ್ನ ಎದುರಿಸಬೇಕಾ ಅಂತ ಅನ್ನಿಸಿದ್ದಂತೂ ಸುಳ್ಳಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...