alex Certify ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊಮ್ಮಗ ನೀಡಿದ ಫಿಟ್ನೆಸ್ ಚಾಲೆಂಜ್ ಅನ್ನು 80 ವರ್ಷದ ವೃದ್ಧೆಯೊಬ್ಬರು ಪೂರ್ಣಗೊಳಿಸಿದ್ದಾರೆ. ವೃದ್ಧೆ ಬಾರ್‌ಬೆಲ್‌ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಪಂಜಾಬಿ ಇಂಡಸ್ಟ್ರಿ ಎಂಬ ಇನ್‌ಸ್ಟಾಗ್ರಾಮ್‌ ಪುಟದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ, ಟೆರೇಸ್ ಮೇಲೆ ಬಾರ್ಬೆಲ್ ಅನ್ನು ಎತ್ತುತ್ತಿರುವ ವೃದ್ಧೆಯ ವಿಡಿಯೋವನ್ನು ನೋಡಬಹುದು. ತನ್ನ ಅಜ್ಜಿಯ ಫಿಟ್ನೆಸ್ ಚಾಲೆಂಜ್ ಅನ್ನು ಪೂರ್ಣಗೊಳಿಸುವ ಸಾಮರ್ಥ್ಯ ಆಕೆಯ ಮೊಮ್ಮಗನ ಅಚ್ಚರಿಗೆ ಕಾರಣವಾಗಿದೆ.

ಆದರೆ, ಈ ಮಹಿಳೆ ಯಾರೆಂಬ ಗುರುತು ತಿಳಿದಿಲ್ಲ. ಆದರೆ, ತನ್ನ ಮೊಮ್ಮಗನ ಸವಾಲಿಗೆ ಉತ್ತರಿಸುವುದಕ್ಕಾಗಿ ಈ ಚಾಲೆಂಜ್ ಅನ್ನು ಆಕೆ ಸ್ವೀಕರಿಸಿದ್ದಾಳೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸಾವಿರಾರು ವೀಕ್ಷಣೆಗಳನ್ನು ಸ್ವೀಕರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೃದ್ಧರ ಹಲವಾರು ಸ್ಪೂರ್ತಿದಾಯಕ ವಿಡಿಯೋಗಳು ಆಗಾಗ ಶೇರ್ ಆಗುತ್ತಿವೆ. 90 ವರ್ಷದ ವ್ಯಕ್ತಿಯೊಬ್ಬರು ತನ್ನ ಮೊಮ್ಮಗಳೊಂದಿಗೆ ಜೀವನದಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡುವ ವಿಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.

ಇತ್ತೀಚೆಗಷ್ಟೇ ವೃದ್ಧೆಯೊಬ್ಬರು ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿಗೆ ಡಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅವರನ್ನು ಇಂಟರ್ನೆಟ್ ನಲ್ಲಿ ಡಿಜೆ ದಾದಿ ಅಂತಾನೇ ಕರೆಯಲಾಯ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...