alex Certify ಪ್ರಿಯತಮೆ ಭೇಟಿಗಾಗಿ ರಾತ್ರಿ ʼಪವರ್ ಕಟ್ʼ ಮಾಡ್ತಿದ್ದ ಲೈನ್‍ಮ್ಯಾನ್ ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆ ಭೇಟಿಗಾಗಿ ರಾತ್ರಿ ʼಪವರ್ ಕಟ್ʼ ಮಾಡ್ತಿದ್ದ ಲೈನ್‍ಮ್ಯಾನ್ ..!

ಲೈನ್‍ಮ್ಯಾನ್ ಒಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಗ್ರಾಮದ ಪವರ್ ಕಟ್ ಮಾಡುತ್ತಿದ್ದ. ಕೊನೆಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಇದೀಗ ಆಕೆಯನ್ನು ಮದುವೆಯಾಗಿದ್ದಾನೆ.

ಬಿಹಾರ ರಾಜ್ಯದ ಗ್ರಾಮವೊಂದರಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುವ ವ್ಯಕ್ತಿಯೊಬ್ಬ ರಾತ್ರಿ ವೇಳೆ ತನ್ನ ಪ್ರಿಯತಮೆಯನ್ನು ಭೇಟಿಯಾಗುತ್ತಿದ್ದ. ಇದು ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಆ ಗ್ರಾಮದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ.

ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಯಾವುದೇ ವಿದ್ಯುತ್ ಕಡಿತದ ಸಮಸ್ಯೆಯಿಲ್ಲ ಎಂಬುದನ್ನು ಗ್ರಾಮಸ್ಥರು ಮನಗಂಡಿದ್ದಾರೆ. ಆದರೆ ಪೂರ್ಣಿಯಾ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ಮಾತ್ರ ಆಗಾಗ್ಗೆ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಕಾರಣವನ್ನು ಕೂಲಂಕಷವಾಗಿ ತನಿಖೆ ಮಾಡಿದಾಗ ನಿಜಾಂಶ ಗೊತ್ತಾಗಿದೆ. ಲೈನ್ ಮ್ಯಾನ್ ಕಳ್ಳಾಟ ಗ್ರಾಮಸ್ಥರ ಮುಂದೆ ಬಟಾಬಯಲಾಗಿದೆ.

ಕೊನೆಗೆ ಪವರ್ ಕಟ್ ಸಮಸ್ಯೆಯನ್ನು ಗ್ರಾಮಸ್ಥರೇ ಬಗೆಹರಿಸಲು ಮುಂದಾಗಿದ್ದಾರೆ. ಇನ್ಮುಂದೆ ವಿದ್ಯುತ್ ವ್ಯತ್ಯಯ ಉಂಟಾಗಬಾರದು ಎಂಬ ಕಾರಣಕ್ಕೆ ಸರಪಂಚ್ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಗೆಳತಿಯನ್ನು ವರಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...