alex Certify ಪ್ರವಾಸಕ್ಕೆ ಮುನ್ನ ʼಟ್ರಾವೆಲಿಂಗ್ʼ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಕ್ಕೆ ಮುನ್ನ ʼಟ್ರಾವೆಲಿಂಗ್ʼ ಟಿಪ್ಸ್

ಒತ್ತಡದ ಜೀವನದಲ್ಲಿ ವಿಶ್ರಾಂತಿಯನ್ನು ಮನಸ್ಸು ಬೇಡುತ್ತದೆ. ದಿನವಿಡಿ ದುಡಿಯುವ ಮಂದಿ ನಾಲ್ಕೈದು ದಿನ ನೆಮ್ಮದಿಯಾಗಿರಲು ಪ್ರವಾಸವನ್ನು ಆಯ್ಕೆ ಮಾಡಿಕೊಳ್ತಾರೆ. ಕೆಲಸದ ಜೊತೆ ಪರಿಸರ ಬದಲಾಗುವುದ್ರಿಂದ ಮನಸ್ಸು ಉಲ್ಲಾಸಿತಗೊಂಡು ಒತ್ತಡ ಕಡಿಮೆಯಾಗುತ್ತದೆ.

ಅನುಕೂಲಕ್ಕೆ ತಕ್ಕಂತೆ ಪ್ರವಾಸ, ಪಿಕ್ನಿಕ್ ಗೆ ಹೋಗುವುದು ಒಳ್ಳೆ ಅಭ್ಯಾಸ. ಆದ್ರೆ ಯಾವುದೇ ಪ್ಲಾನ್ ಇಲ್ಲದೆ ದಿಢೀರ್ ಪ್ರವಾಸ, ಪ್ಲಾನ್ ಮಾಡಿ ಹೋದ ಪ್ರವಾಸ ಅಷ್ಟು ಮಜ, ನೆಮ್ಮದಿ, ಖುಷಿ ನೀಡುವುದಿಲ್ಲ. ಕೆಲವೊಮ್ಮೆ ಅಂದುಕೊಂಡಿದ್ದೊಂದು ಆಗೋದು ಇನ್ನೊಂದು ಆಗಿ ಪ್ರವಾಸದ ರುಚಿ ಹಾಳಾಗಬಹುದು. ಹಾಗಾಗಿ ಪ್ರವಾಸಕ್ಕೂ ಮುನ್ನ ಕೆಲವೊಂದು ಸಿದ್ಧತೆ ನಡೆಸಬೇಕು.

ಪ್ರವಾಸಕ್ಕೆ ಹೊರಡುವ ಮೊದಲು ಅಗತ್ಯ ಸಾಮಾನುಗಳನ್ನು ಸರಿಯಾಗಿ ಪ್ಯಾಕ್ ಮಾಡಿಕೊಳ್ಳಿ. ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ತುಂಬಿಕೊಳ್ಳುವ ಬದಲು ಸರಿಯಾಗಿ ತುಂಬಿದ್ರೆ ಕಡಿಮೆ ಜಾಗದಲ್ಲಿ ಹೆಚ್ಚು ಬಟ್ಟೆಗಳನ್ನು ಹಿಡಿಸಬಹುದು.

ನಿಮ್ಮ ಚೀಲದಲ್ಲಿ ಸೋರಿಕೆಯಾಗುವಂತ ಸಾಮಾನುಗಳಿದ್ರೆ ಬಟ್ಟೆಗಳು ಕಲೆ ಆಗುವ ಸಾಧ್ಯತೆ ಇರುತ್ತದೆ. ಅದನ್ನು ಡಬಲ್ ಪ್ಯಾಕ್ ಮಾಡಿ ಸೀಲ್ ಮಾಡಿ.

ಹೆಚ್ಚು ದಿನದ ಪ್ರವಾಸಕ್ಕಾಗಿ ಆದಷ್ಟು ಕಡಿಮೆ ಬಟ್ಟೆ ಇರಲಿ. ಆದರೆ ಅದು ಚೆನ್ನಾಗಿ ಒಣಗಿದ್ದರೆ ಒಳ್ಳೆಯದು. ರಾತ್ರಿ ತೊಳೆದು ಬೆಳಿಗ್ಗೆ ತನಕ ಒಣಗಿಸಬಹುದು.

ನಿಮ್ಮಲ್ಲಿರುವ ಹಣವನ್ನು ಬೇರೆ ಬೇರೆ ಜಾಗದಲ್ಲಿರಿಸಿ. ಅಪರಿಚಿತ ಸ್ಥಳದಲ್ಲಿ ಕಳ್ಳತನ ಆದರೆ ಮತ್ತೊಂದರ ಹಣ ಬಳಸಿಕೊಳ್ಳಬಹುದು.

ಬೇರೆ ನಗರಗಳಲ್ಲಿ ನಿಮ್ಮ ಊಟದ ಬಗ್ಗೆ ಕಾಳಜಿ ವಹಿಸಿ. ಆ ನಗರದ ವಾತಾವರಣಕ್ಕೆ ಸರಿಹೊಂದುವ ಆಹಾರವನ್ನೇ ಸೇವಿಸಿ. ಆದಷ್ಟು ಹಣ್ಣುಗಳನ್ನು ಬಳಸುವುದು ಉತ್ತಮ. ಪ್ರವಾಸಕ್ಕೂ ಮೊದಲು ಆ ಪ್ರದೇಶದ ಆಹಾರದ ಬಗ್ಗೆ ತಿಳಿದುಕೊಳ್ಳಿ. ಇದರಿಂದಾಗಿ ನಿಮಗೆ  ಊಟದ ಯಾವುದೇ ಸಮಸ್ಯೆ ಆಗೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...