alex Certify ಪೊಲೀಸ್​ ಇಲಾಖೆಯಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ ʼಮಹಾʼ ಸರ್ಕಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಇಲಾಖೆಯಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ ʼಮಹಾʼ ಸರ್ಕಾರ….!

ಪ್ರಕರಣಗಳ ತನಿಖೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಸಹಾಯಕ ಇನ್​ಸ್ಪೆಕ್ಟರ್​ ಹಾಗೂ ಹೆಡ್​ ಕಾನ್ಸ್​ಟೇಬಲ್​ ಶ್ರೇಣಿಯ ಐವರು ಕಿರಿಯ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ನೀಡುವಂತೆ ಮುಂಬೈ ಪೊಲೀಸ್​ ಪ್ರಧಾನ ಕಚೇರಿಯು ಪ್ರತಿ ಪೊಲೀಸ್​ ಠಾಣೆಯ ಹಿರಿಯ ಪೊಲೀಸ್​ ಇನ್​ಸ್ಪೆಕ್ಟರ್​ಗಳಿಗೆ ನಿರ್ದೇಶನ ನೀಡಿದೆ.

ಕಿರಿಯ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೂತನವಾಗಿ ನೇಮಕಗೊಂಡಿರುವ ಮುಂಬೈ ಪೊಲೀಸ್​ ಕಮಿಷನರ್​​ ಸಂಜಯ್​ ಪಾಂಡೆ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಪತ್ತೆ ಮಾಡುವ ಅಧಿಕಾರಿಗೆ ನೀಡಲಾಗುತ್ತದೆ.

ವಿವಿಧ ಜಿಲ್ಲೆಗಳ ಠಾಣೆಯಲ್ಲಿ ಎಎಸ್​ಐ ಹಾಗೂ ಹೆಡ್​ಕಾನ್​ಸ್ಟೇಬಲ್​​ನ್ನು ಸ್ಟೇಷನ್​ ಹೌಸ್​ ಅಥವಾ ಡಿಟೆಕ್ಷನ್​ ಆಫಿಸರ್​ ಆಗಿ ನೇಮಿಸಲಾಗುತ್ತದೆ. ಇಲ್ಲಿ ನಗರ ಪೊಲೀಸ್​ ಠಾಣೆಗಳಿಗೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಮುಂಬೈನಲ್ಲಿ ಪೊಲೀಸ್​​ ಸಬ್​ ಇನ್​ಸ್ಪೆಕ್ಟರ್​ ಅಥವಾ ಹೆಚ್ಚಿನ ಶ್ರೇಣಿಯ ಪೊಲೀಸ್​ ಅಧಿಕಾರಿಯು ಈ ಹುದ್ದೆಯನ್ನು ನಿಭಾಯಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...