alex Certify ಪೊಲೀಸರು ಹಣ ತೆಗೆದುಕೊಂಡರೆ ಕೆಲಸ ಆದಂತೆಯೇ ಎಂದ ಅಧಿಕಾರಿ…! ಶಾಕಿಂಗ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರು ಹಣ ತೆಗೆದುಕೊಂಡರೆ ಕೆಲಸ ಆದಂತೆಯೇ ಎಂದ ಅಧಿಕಾರಿ…! ಶಾಕಿಂಗ್ ವಿಡಿಯೋ ವೈರಲ್

ಉನ್ನಾವೋ: ಏನಾದ್ರೂ ಕೆಲಸವಾಗಬೇಕಿದ್ರೆ ಪೊಲೀಸರಿಗೆ ಲಂಚ ಕೊಟ್ಟರೆ ಮಾತ್ರ ಆಗುತ್ತದೆ ಎಂಬ ಆರೋಪಗಳು ಅಲ್ಲಿ-ಇಲ್ಲಿ ಕೇಳಿಬಂದಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೀಗ ಸ್ವತಃ ಪೊಲೀಸರೇ, ಹಣ ಕೊಟ್ರೆ ಕೆಲಸ ಆಗುತ್ತದೆ ಎಂಬಂತಹ ಮಾತುಗಳನ್ನು ಹೇಳಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ.

ಹೌದು, ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಒಬ್ಬರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರು ಹಣ ಪಡೆದ್ರೆ ಆ ಕೆಲಸ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಧಿಕಾರಿ, ಆರಕ್ಷಕ ಇಲಾಖೆಗಿಂತ ಉತ್ತಮವಾದ ಇಲಾಖೆ ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಇಂದಿಗೂ ಪ್ರಾಮಾಣಿಕ ಇಲಾಖೆ ಎಂಬುದು ಇದ್ದರೆ ಅದು ಪೊಲೀಸ್ ಇಲಾಖೆ ಮಾತ್ರ. ಪೊಲೀಸರು ನಿಮ್ಮಿಂದ ಹಣ ಪಡೆದು ಕೆಲಸ ಮಾಡುವುದಾಗಿ ಹೇಳಿದರೆ, ಖಂಡಿತ ಆ ಕೆಲಸ ಆಗುತ್ತದೆ. ಬೇರೆ ಇಲಾಖೆಗಳಲ್ಲಿ ಹಣ ಕೊಟ್ಟರೂ ಬೇಗನೆ ನಾವು ಹೇಳಿರುವಂತಹ ಕೆಲಸ ಆಗುವುದಿಲ್ಲ ಎಂದಿದ್ದಾರೆ.

ಈ ಕೊರೋನಾ ಕಾಲದಲ್ಲಿ ಶಿಕ್ಷಕರು ಮನೆಯಲ್ಲಿಯೇ ಕುಳಿತು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿದೆ. ಆದರೆ, ಕೊರೋನಾ ವೈರಸ್ ಬಂದಾಗಿನಿಂದ ಪೊಲೀಸರ ಕರ್ತವ್ಯ ಹೆಚ್ಚಾಗುತ್ತದೆ ಎಂದು ಪೊಲೀಸ್ ಹೇಳಿದ್ದಾರೆ.

ಈ ವಿಡಿಯೋವನ್ನು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಗಮನಿಸಿರುವ ಉನ್ನಾವ್ ಪೊಲೀಸರು ಈ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...