alex Certify ‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದ ಆರೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದ ಆರೋಪಿ

ಉತ್ತರ ಪ್ರದೇಶದ ಆಗ್ರಾದಲ್ಲಿ ಆರೋಪಿಯೊಬ್ಬ ನಿಷೇಧಿತ ಮರಿಜುವಾನ ಮಾದಕ ವಸ್ತುವನ್ನು ‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಆರೋಪಿ, ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿ ಇದ್ದು ಆತನ ಸುಳಿವು ನೀಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. ಈತ ಎರಡು ಕೋಟಿ ರೂಪಾಯಿ ಮೌಲ್ಯದ ಮರಿಜುವಾನ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ – ದಿ ರೈಸ್’2021 ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದು ಅಪಾರ ಜನಪ್ರಿಯತೆ ಗಳಿಸಿತ್ತು. ಅದರಲ್ಲೂ ಈ ಚಿತ್ರದ ಡೈಲಾಗ್ ಎಲ್ಲರೂ ಫಿದಾ ಆಗಿದ್ದರು. ರಕ್ತ ಚಂದನ ಕಳ್ಳ ಸಾಗಾಣಿಕೆದಾರರ ಕುರಿತ ಈ ಚಿತ್ರದ ಸ್ಪೂರ್ತಿಯಿಂದ ಈಗ ಮರಿಜುವಾನ ಸಾಗಿಸಲು ಹೋದ ಆರೋಪಿ ಸಿಕ್ಕಿಬಿದ್ದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...