alex Certify ಪುರೋಹಿತರು ಆರತಿ ಹಿಡಿದಾಗ ವರ ಮಾಡಿದ ಕೆಲಸ ನೋಡಿ ಬಿದ್ದುಬಿದ್ದು ನಕ್ಕ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರೋಹಿತರು ಆರತಿ ಹಿಡಿದಾಗ ವರ ಮಾಡಿದ ಕೆಲಸ ನೋಡಿ ಬಿದ್ದುಬಿದ್ದು ನಕ್ಕ ಜನ

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಬಹಳ ಫನ್ನಿ ಆಗಿದ್ದು, ಪುರೋಹಿತರು ಆರತಿಯನ್ನು ತೆಗೆದುಕೊಳ್ಳುವಂತೆ ತೋರಿದಾಗ ಈ ವರ ಮಾಡಿದ ಅವಾಂತರ ನೋಡಿ ಎಲ್ಲರೂ ಕಕ್ಕಾಬಿಕ್ಕಿ !

ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಫ್ಯಾಬ್‌ ವೆಡ್ಡಿಂಗ್ಸ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿದೆ. “ಹಿಂದು ವಿವಾಹ ಪದ್ಧತಿಯಲ್ಲಿ ಮಾಡಬಾರದ್ದೇನು?” ಎಂಬ ಶೀರ್ಷಿಕೆಯನ್ನು ನೀಡಿದೆ.

ಈ ಫನ್ನಿ ವಿಡಿಯೋದಲ್ಲಿ, ಪುರೋಹಿತರು ದೇವರಿಗೆ ಆರತಿ ಮಾಡಿದ ಬಳಿಕ ಸ್ವೀಕರಿಸುವಂತೆ ಹಿಡಿದಿದ್ದಾರೆ. ಆಗ ಒಬ್ಬ ವರ ಸರಿಯಾದ ಕ್ರಮದಲ್ಲಿ ಆರತಿ ಸ್ವೀಕರಿಸಿದರೆ, ಇನ್ನೊಬ್ಬಾತ ಕೇಕ್‌ ಮೇಲಿನ ಕ್ಯಾಂಡಲ್‌ ಆರಿಸುವಂತೆ ಆರತಿಯನ್ನು ಊದಿ ಕೆಡಿಸಿದ.

ಪಕ್ಕದಲ್ಲಿ ಕುಳಿತವ ಮತ್ತು ಪುರೋಹಿತರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಬಳಿಕ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಒಂದು ಕ್ಷಣ ಆರತಿ ಕೆಡಿಸಿದಾತ ಕೂಡ ಕಕ್ಕಾಬಿಕ್ಕಿಯಾದ. ಬಳಿಕ ಆತನೂ ಪೆದ್ದು ಪೆದ್ಧಾಗಿ ನಗುವ ದೃಶ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...