alex Certify ಪುಟ್ಟ ಮಕ್ಕಳ ಪೋಷಕರು ಓದಲೇಬೇಕು ಈ ‘ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಕ್ಕಳ ಪೋಷಕರು ಓದಲೇಬೇಕು ಈ ‘ಸುದ್ದಿ’

Does My Child Have Autism? - HelpGuide.orgಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪಾಲಕರ ಜವಾಬ್ದಾರಿ. ಕೆಲವೊಂದು ರೋಗಗಳು ಹುಟ್ಟಿನಿಂದಲೇ ಮಗುವನ್ನು ಕಾಡುತ್ತೆ. ಅದರಲ್ಲಿ ಸ್ವಲೀನತೆ ಅಂದ್ರೆ ಆಟಿಸಂ ಕೂಡ ಒಂದು.

ಆಟಿಸಂ ಒಂದು ಮಾನಸಿಕ ರೋಗ. ಮಕ್ಕಳಿರುವಾಗಲೇ ಇದರ ಲಕ್ಷಣ ಕಂಡು ಬರುತ್ತದೆ. ಈ ಮಕ್ಕಳ ಬೆಳವಣಿಗೆ ತುಲನಾತ್ಮಕವಾಗಿ ನಿಧಾನ. ಹುಟ್ಟಿದಾಗಿನಿಂದ ಮೂರು ವರ್ಷಗಳವರೆಗೆ ಈ ರೋಗ ಡೆವಲಪ್ ಆಗುತ್ತೆ. ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಾ ಹೋಗುತ್ತದೆ.

ಇದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ನರಮಂಡಲಕ್ಕೆ ಹಾನಿಯಾಗುವುದರಿಂದ ಹೀಗಾಗುತ್ತದೆಯೆಂದು ನಂಬಲಾಗಿದೆ. ತಾಯಿ ಗರ್ಭಿಣಿಯಾಗಿದ್ದಾಗ ಸರಿಯಾದ ಆಹಾರ ಸೇವಿಸದೆ ಹೋದಲ್ಲಿ ಈ ರೋಗ ಕಂಡುಬರುತ್ತದೆ ಎಂದು ಅಂದಾಜಿಸಲಾಗಿದೆ.

ಆಟಿಸಂ ಲಕ್ಷಣಗಳು

ಸಾಮಾನ್ಯವಾಗಿ ಮಗು, ತಾಯಿ ಹಾಗೂ ಇತರರ ಮುಖ ನೋಡಿ ಪ್ರತಿಕ್ರಿಯೆ ನೀಡುತ್ತೆ. ಆದರೆ ಆಟಿಸಂನಿಂದ ಬಳಲುವ ಮಕ್ಕಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ಆಟಿಸಂನಿಂದ ಬಳಲುವ ಮಕ್ಕಳು ಮಾತು ಕೇಳಿಯೂ ಪ್ರತಿಕ್ರಿಯೆ ನೀಡುವುದಿಲ್ಲ. ರೋಗದಿಂದ ಬಳಲುವ ಮಕ್ಕಳು ಬೇರೆಯವರ ಜೊತೆ ಬೆರೆಯುವುದು ಕಡಿಮೆ. ಅಲ್ಲದೆ ಇದು ಭಯದ ರೂಪದಲ್ಲಿ ಹೊರ ಬರುತ್ತಿರುತ್ತದೆ.

ಒಬ್ಬಂಟಿಯಾಗಿರಲು ಇಚ್ಛಿಸುವ ಮಕ್ಕಳು, ಒಂದೇ ವಸ್ತುವಿನ ಮೇಲೆ ಲಕ್ಷ್ಯ ಇಟ್ಟಿರುತ್ತಾರೆ. ಅವರ ಚಿಂತನೆ ಅಭಿವೃದ್ಧಿಯಾಗದಿರುವ ಕಾರಣ ಅವರು ಸೃಜನಶೀಲರಾಗಿರುವುದಿಲ್ಲ.

ಒಂಭತ್ತು ತಿಂಗಳಾದರೂ ನಿಮ್ಮ ಮಗು ನಗುತ್ತಿಲ್ಲ, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಾದರೆ ಎಚ್ಚರ. ಇದು ಆಟಿಸಂ ಲಕ್ಷಣ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...