alex Certify ಪುಟ್ಟ ಕಂದನನ್ನು ನಕ್ಕು ನಗಿಸಿದ ಶ್ವಾನ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದನನ್ನು ನಕ್ಕು ನಗಿಸಿದ ಶ್ವಾನ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿಗಳ ವಿಡಿಯೋವನ್ನು ನೋಡುವುದೇ ಮಹದಾನಂದವಾಗಿರುತ್ತದೆ. ಶ್ವಾನ, ಬೆಕ್ಕು, ಆನೆಗಳ ವಿಡಿಯೋ ನೋಡೋದೇ ಒಂಥರಾ ಖುಷಿ. ಇದೀಗ ಪುಟ್ಟ ಕಂದನನ್ನು ನಗಿಸಿದ ಶ್ವಾನವೊಂದರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಹುಶಃ ನಿಮಗೂ ಈ ವಿಡಿಯೋ ಇಷ್ಟವಾಗಬಹುದು.

ಶ್ವಾನವು ಪುಟ್ಟ ಕಂದನನ್ನು ನಗಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುಎಸ್ ನ ಲೂಸಿಯಾನದಲ್ಲಿ ಏಳು ತಿಂಗಳ ಮಗು ತಮ್ಮ ಮನೆಯ ಸಾಕು ನಾಯಿಯೊಂದಿಗೆ ಆಟವಾಡುತ್ತಿದೆ. ಬ್ರೋನ್ ಎಂಬ ಹೆಸರಿನ ಎರಡು ವರ್ಷದ ಲ್ಯಾಬ್ರಡಾರ್ ಮಗುವಿನ ಬಳಿ ಹಾರಿ, ಅತ್ತಿತ್ತ ಓಡಾಡಿದೆ. ನಾಯಿಮರಿಯೊಂದಿಗೆ ಆಟವಾಡುವಾಗ ಕಂದ ಲಿಯಾಮ್ ತನ್ನ ನಗುವನ್ನು ತಡೆಯಲು ಸಾಧ್ಯವಾಗಲಿಲ್ಲ.

ಈ ದೃಶ್ಯವನ್ನು ಮಗು ಲಿಯಾಮ್ ನ ತಾಯಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಶ್ವಾನವು ಮಗುವಿನೊಂದಿಗೆ ಆಟವಾಡುತ್ತಿರುವಾಗ ಕಂದ ನಗುವುದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು.

ಇನ್ನು ವೈರಲ್ ವಿಡಿಯೋ ಟಿವಿಯಲ್ಲಿ ಪ್ಲೇ ಮಾಡಿದಾಗ, ಶ್ವಾನವು ತನ್ನನ್ನು ತಾನು ಗುರುತಿಸಿಕೊಂಡಿದೆ. ಉತ್ಸಾಹದಿಂದ ಟಿವಿಯತ್ತ ಹಾರಿದೆ. ಟಿವಿಯಲ್ಲಿ ತನ್ನನ್ನು ತಾನೇ ನೋಡುವ ನಾಯಿಯ ಆರಾಧ್ಯ ದೃಶ್ಯವು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಲೇಖಕ ಮೆಲ್ ರಾಬಿನ್ಸ್ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಮರುಹಂಚಿಕೊಂಡಿದ್ದಾರೆ.

https://www.youtube.com/shorts/fmTpv1Pw-6c

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...