alex Certify ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ

ಢಾಕಾ : ಪಾಕ್ ವಿರುದ್ಧ ಭಾರತೀಯ ಹಾಕಿ ತಂಡವು ಭರ್ಜರಿ ಜಯ ಸಾಧಿಸಿದೆ. ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ಧ 3-1 ಗೋಲುಗಳಿಂದ ಜಯ ದಾಖಲಿಸಿದೆ.

ಈ ಗೆಲುವಿನ ಮೂಲಕ ಭಾರತ ತನ್ನ ಸೆಮಿಫೈನಲ್ ಕನಸು ಜೀವಂತವಾಗಿರಿಸಿಕೊಂಡಿದೆ. ಭಾರತ ಹಾಕಿ ತಂಡದ ಪರ ಹರ್ಮನ್ ಪ್ರೀತ್ ಸಿಂಗ್ ಅವರು ಎರಡು ಗೋಲುಗಳನ್ನು ದಾಖಲಿಸಿದ್ದರೆ, ಆಕಾಶ್ ದೀಪ್ ಸಿಂಗ್ ಒಂದು ಗೋಲು ಬಾರಿಸಿದರು.

ಈ ಮೂಲಕ ಭಾರತ ತಂಡವು ಈ ಟ್ರೋಫಿಯ ರೌಂಡ್ ರಾಬಿನ್ ಮೂರನೇ ಪಂದ್ಯ ಗೆದ್ದುಕೊಂಡಿದೆ. ಪಂದ್ಯ ಆರಂಭದ 8ನೇ ನಿಮಿಷದಲ್ಲಿ ಭಾರತ ತಂಡ ಮೊದಲ ಗೋಲು ದಾಖಲಿಸಿತು. ಆಕಾಶ್ ದೀಪ್ ಸಿಂಗ್ ಮೂರನೇ ಕ್ವಾರ್ಟರ್ ನ 48ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಿಸಿದರು.

ಅತ್ಯಾಚಾರ ಘೋರ ಅಪರಾಧ, ಸಮರ್ಥನೀಯವಲ್ಲ: ರೇಪ್ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಖಂಡನೆ

ಆದರೆ, ಮೂರನೇ ಕ್ವಾರ್ಟರ್ ನ ಕೊನೆಯ ನಿಮಿಷದಲ್ಲಿ ಪಾಕ್ ನಿಂದ ಗೋಲು ಬಂದಿತು. ಆಗ 2-1ರ ಅಂತರದಲ್ಲಿ ಪಾಕ್ ಹಿಂದೆ ಉಳಿದಿತ್ತು. ನಂತರ ಭಾರತೀಯ ಆಟಗಾರರ ಎದುರು ಪಾಕ್ ಗೋಲು ಬಾರಿಸಲು ತಡಕಾಡಿತು. 4ನೇ ಕ್ವಾರ್ಟರ್ ನಲ್ಲಿ ಭಾರತದ ಹರ್ಮನ್ ಪ್ರೀತ್ ಸಿಂಗ್ ತಂಡದ ಮೂರನೇ ಗೋಲು ಬಾರಿಸಿ ಭರ್ಜರಿ ಜಯಕ್ಕೆ ಕಾರಣರಾದರು. ಈ ಮೂಲಕ 3-1ರ ಅಂತರದಲ್ಲಿ ಭಾರತ ಗೆದ್ದಿತು.

ಭಾರತ ತಂಡವು ಟೂರ್ನಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 9-0 ಅಂತರದಲ್ಲಿ ಜಯ ಸಾಧಿಸಿತ್ತು. ಈಗ ಮೂರನೇ ಪಂದ್ಯದಲ್ಲಿ ಪಾಕ್ ವಿರುದ್ಧ ಜಯ ಸಾಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...