alex Certify ಪಾಕಿಸ್ತಾನದ ಈ 10 ವಸ್ತುಗಳನ್ನು ಭಾರತದಲ್ಲಿ ಎಲ್ಲರೂ ಬಳಸ್ತಾರೆ, ಅಚ್ಚರಿಯಾದರೂ ಇದು ಸತ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ಈ 10 ವಸ್ತುಗಳನ್ನು ಭಾರತದಲ್ಲಿ ಎಲ್ಲರೂ ಬಳಸ್ತಾರೆ, ಅಚ್ಚರಿಯಾದರೂ ಇದು ಸತ್ಯ…..!

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದೆ. ಬಹಳ ಸಮಯದಿಂದ ಈ ರಾಷ್ಟ್ರ ಹಣದುಬ್ಬರದಿಂದ ಬಳಲುತ್ತಿದೆ. ಪಾಕಿಸ್ತಾನದ ಜನರು ಆಹಾರಕ್ಕಾಗಿ ಹಾತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 10,000 ರೂಪಾಯಿಗೆ ತಲುಪಿದೆ.  ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಇತರ ದೇಶಗಳತ್ತ ಕೈಚಾಚಿ ನಿಂತಿದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವು ವಸ್ತುಗಳು ಪಾಕಿಸ್ತಾನದಿಂದ ಭಾರತಕ್ಕೆ ರಫ್ತಾಗುತ್ತವೆ. ಆ ವಸ್ತುಗಳು ಪ್ರತಿ ಮನೆಯಲ್ಲೂ ಬಳಸಲ್ಪಡುತ್ತವೆ.

ಪಾಕಿಸ್ತಾನದ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳು ಬಹಳ ಪ್ರಸಿದ್ಧವಾಗಿವೆ. ಪಾಕಿಸ್ತಾನದ ಡ್ರೈ ಫ್ರೂಟ್ಸ್‌ಗೆ ಹಲವು ದೇಶಗಳಲ್ಲಿ ಬೇಡಿಕೆ ಇದೆ. ಭಾರತವು 2017 ರಲ್ಲಿ 488.5 ಮಿಲಿಯನ್ ಡಾಲರ್‌ ಮೌಲ್ಯದ ಪಾಕಿಸ್ತಾನಿ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಆಗ ಭಾರತವು ಪಾಕಿಸ್ತಾನದಿಂದ ಡ್ರೈಫ್ರೂಟ್ಸ್, ಕಲ್ಲಂಗಡಿ  ಜೊತೆಗೆ ಹಲವು ಬಗೆಯ ಹಣ್ಣುಗಳನ್ನು ಆಮದು ಮಾಡಿಕೊಂಡಿತ್ತು.  ಕಲ್ಲು ಉಪ್ಪು ಮತ್ತು ಸಿಮೆಂಟ್ಬಿನಾನಿ ಸಿಮೆಂಟ್ ಅನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗುತ್ತದೆ. ಬಿನಾನಿ ಸಿಮೆಂಟ್‌ಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್‌ ಇದೆ. ಪಾಕಿಸ್ತಾನದ ಉಪ್ಪು, ಗಂಧಕ, ಕಲ್ಲು ಮತ್ತು ಸುಣ್ಣಕ್ಕೆ ಭಾರತದಲ್ಲಿಯೂ ಉತ್ತಮ ಬೇಡಿಕೆಯಿದೆ.

ಉಪವಾಸದ ಸಮಯದಲ್ಲಿ ಪ್ರತಿ ಮನೆಯಲ್ಲೂ ಬಳಸುವ ಕಲ್ಲು ಉಪ್ಪು ಪಾಕಿಸ್ತಾನದಿಂದ ಬರುತ್ತದೆ. ಪಾಕಿಸ್ತಾನದ ಮುಲ್ತಾನಿ ಮಿಟ್ಟಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಕನ್ನಡಕಗಳ ಆಪ್ಟಿಕಲ್‌ಗಳನ್ನು ಪಾಕಿಸ್ತಾನದಿಂದ ಉತ್ತಮ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ. ಚರ್ಮದ ಉತ್ಪನ್ನಗಳು ಕೂಡ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತವೆ. ಪಾಕಿಸ್ತಾನದ ಹತ್ತಿಯನ್ನು ಕೂಡ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಪಾಕಿಸ್ತಾನವು ಉಕ್ಕು ಮತ್ತು ತಾಮ್ರವನ್ನು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತದೆ.

ಸಾವಯವವಲ್ಲದ ರಾಸಾಯನಿಕಗಳು, ಲೋಹದ ಸಂಯುಕ್ತಗಳು ಸಹ ಪಾಕಿಸ್ತಾನದಿಂದ ಬರುತ್ತವೆ. ಸಕ್ಕರೆಯಿಂದ ತಯಾರಿಸಿದ ಮಿಠಾಯಿ ಮತ್ತಿತರ ತಿನಿಸುಗಳನ್ನು ಸಹ ಆಮದು ಮಾಡಿಕೊಳ್ಳಲಾಗುತ್ತದೆ. ಲಾಹೋರ್ ಕುರ್ತಾಗಳು ಮತ್ತು ಪೇಶಾವರಿ ಚಪ್ಪಲ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...