alex Certify ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಹಚ್ಚೆ ಹಾಕಿಸಿದ ಕಿರುತೆರೆ ನಟಿ; ಸೋಶಿಯಲ್ ಮೀಡಿಯಾದಲ್ಲಿ ಟ್ಯಾಟೂ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಹಚ್ಚೆ ಹಾಕಿಸಿದ ಕಿರುತೆರೆ ನಟಿ; ಸೋಶಿಯಲ್ ಮೀಡಿಯಾದಲ್ಲಿ ಟ್ಯಾಟೂ ಫೋಟೋ ವೈರಲ್

ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಆರು ತಿಂಗಳು ಪೂರೈಸುತ್ತಿದ್ದರೂ, ಕರ್ನಾಟಕದ ಜನತೆಗೆ ಅಪ್ಪು‌ ಅವರನ್ನು ಮರೆಯಲಾಗುತ್ತಿಲ್ಲ. ಅಪ್ಪು ಹೆಸರಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ನಡೆಸುತ್ತಲೇ ಬಂದಿದ್ದಾರೆ ಅಭಿಮಾನಿಗಳು.

ಚಿತ್ರರಂಗದ ಕಲಾವಿದರು ಹಾಗೂ ಕಿರುತೆರೆ ಕಲಾವಿದರು ಅಪ್ಪು ಅವರ ಮೇಲಿನ ಅಭಿಮಾನದಿಂದಾಗಿ ಹಲವಾರು ಕಾರ್ಯಕ್ರಮಗಳನ್ನು
ನಡೆಸಿದ್ದರು. ಇದೀಗ ನಾಗಿಣಿ 2 ಖ್ಯಾತಿಯ ಕಿರುತೆರೆ ನಟಿ ನಮ್ರತಾ, ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ಫಾರೆವರ್ ಎಂದು ಬರೆದುಕೊಂಡಿದ್ದಾರೆ.

ಅಕ್ರಮವಾಗಿ ʼರೇಶನ್‌ ಕಾರ್ಡ್‌ʼ ಪಡೆದಿದ್ದೀರಾ…? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯದ ಕ್ರಷ್ ಪುನೀತ್ ರಾಜ್ ಕುಮಾರ್, ಇಂದಿಗೂ ಅವರ ಸಿನಿಮಾಗಳನ್ನು ಹೆಚ್ಚು ವೀಕ್ಷಿಸುವುದಾಗಿ ಹೇಳಿದ್ದಾರೆ.

ಇದೇ ರೀತಿ ಕಿರುತೆರೆ ನಟ ರಾಘವೇಂದ್ರ,‌ ನಟಿ ಅಮೃತ, ತಮ್ಮ ಮಗಳಿಗೆ ಧೃತಿ ಎಂದು ನಾಮಕರಣ ಮಾಡಿದ್ದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ದಿವ್ಯಾ ದಂಪತಿ, ಯಮುನಾ, ಶ್ರೀನಿಧಿ ಸೇರಿದಂತೆ ಇನ್ನು ಹಲವು ನಟ-ನಟಿಯರು ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...