alex Certify ಪರವಾನಗಿ ಇಲ್ಲದ ವಾಹನ ಓಡಿಸಿದ್ರಾ ರಣವೀರ್​ ಸಿಂಗ್​ ? ನಟನ ವಿರುದ್ಧ ಕ್ರಮಕ್ಕೆ ಟ್ವಿಟರ್​ನಲ್ಲಿ ಕೋರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರವಾನಗಿ ಇಲ್ಲದ ವಾಹನ ಓಡಿಸಿದ್ರಾ ರಣವೀರ್​ ಸಿಂಗ್​ ? ನಟನ ವಿರುದ್ಧ ಕ್ರಮಕ್ಕೆ ಟ್ವಿಟರ್​ನಲ್ಲಿ ಕೋರಿಕೆ

ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ನೆಚ್ಚಿನ ವಾಹನಗಳಲ್ಲಿ ಒಂದಾದ ನೀಲಿ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಕಾರನ್ನು ಅನ್ನು ಚಾಲನೆ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಇದಕ್ಕೆ ಕಾರಣ ಅವರು ಪರವಾನಗಿ ಅವಧಿ ಮೀರಿರುವ ವಾಹನವನ್ನು ಓಡಿಸುತ್ತಿದ್ದರು ಎನ್ನುವುದು.

ರಣವೀರ್ ಸಿಂಗ್​ ಲಂಬೋರ್ಗಿನಿ ಉರಸ್, ಮರ್ಸಿಡಿಸ್ ಮೇಬ್ಯಾಕ್ S500 ಮತ್ತು ಮರ್ಸಿಡಿಸ್-ಬೆನ್ಜ್ ಜಿಎಲ್​ಎಸ್​350ಡಿ ಸೇರಿದಂತೆ ವಿವಿಧ ವಾಹನಗಳನ್ನು ಹೊಂದಿದ್ದಾರೆ. ಅವುಗಳ ಪೈಕಿ ಆಸ್ಟನ್ ಮಾರ್ಟಿನ್ ಚಾಲನೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಆರೋಪಿಸಿರುವ ನೆಟ್ಟಿಗರೊಬ್ಬರು ತಮ್ಮ ಟ್ವೀಟ್‌ನಲ್ಲಿ ಮುಂಬೈ ಪೊಲೀಸರನ್ನು ಟ್ಯಾಗ್​ ಮಾಡಿ ನಟನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ.

“ಮುಂಬೈ ಪೋಲೀಸರೇ, ದಯವಿಟ್ಟು ರಣವೀರ್ ಸಿಂಗ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಅವರು ನಿನ್ನೆ ಓಡಿಸಿದ ಕಾರು​ ಪರವಾನಗಿ ಮೀರಿದ್ದಾಗಿದೆ” ಎಂದು ಟ್ವಿಟರ್​ನಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು ತಾವು ಮುಂಬೈ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಸದ್ಯಕ್ಕೆ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವ ವರದಿಯಾಗಿಲ್ಲ.

ಹಿಂದೊಮ್ಮೆ ಸಂದರ್ಶನದಲ್ಲಿ ರಣವೀರ್​ ಸಿಂಗ್​, ಈ ವಾಹನ ತಮಗೆ ಬಹಳ ಅಚ್ಚುಮೆಚ್ಚು. ಇದಕ್ಕಾಗಿ ಬಹಳ ವೆಚ್ಚ ಮಾಡಿರುವುದಾಗಿ ಹೇಳಿಕೊಂಡಿದ್ದರು. ಈ ಕಾರನ್ನು ತಮ್ಮ ಇಚ್ಛೆಯಂತೆ ಮಾರ್ಪಾಡು ಮಾಡಿಕೊಳ್ಳಲು 3.9 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

Ranveer Singh driving around in Aston Martin with expired insurance: Truth vs Hype

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...