alex Certify ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ನಾಲ್ವರನ್ನು ಹತ್ಯೆಗೈದ ಪಾಪಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ನಾಲ್ವರನ್ನು ಹತ್ಯೆಗೈದ ಪಾಪಿ..!

Wife's suspected extra-marital affair led to Ahmedabad quadruple murder, reveals  police - India Newsಅಹಮದಾಬಾದ್‌: ಪತ್ನಿಯ ಶಂಕಿತ ವಿವಾಹೇತರ ಸಂಬಂಧವು ನಾಲ್ಕು ಕೊಲೆಗೆ ಕಾರಣವಾಗಿರೋ ಅಮಾನುಷ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

ಬೀಗ ಹಾಕಿದ್ದ ಮನೆಯಲ್ಲಿ ಸೋನಾಲ್ ಮರಾಠಿ (37), ಅವರ ಮಕ್ಕಳಾದ ಪ್ರಗತಿ, ಗಣೇಶ್ ಮತ್ತು ಸೋನಾಲ್ ಅವರ ತಂದೆಯ ಅಜ್ಜಿ ಸುಭದ್ರ ಅವರ ಶವಗಳು ಪತ್ತೆಯಾಗಿವೆ. ಪತ್ನಿಯ ಶಂಕಿತ ವಿವಾಹೇತರ ಸಂಬಂಧದಿಂದ ಹತಾಶೆ ಮತ್ತು ಖಿನ್ನತೆಗೆ ಒಳಗಾಗಿದ್ದ ಆರೋಪಿ ವಿನೋದ್ ತನ್ನ ಪತ್ನಿ, ಇಬ್ಬರು ಮಕ್ಕಳು ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಹಂತಕ ಎಸ್ಕೇಪ್ ಆಗಿದ್ದ. ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದರಿಂದ ಆಕೆಯ ಕೊಲೆಗೆ ಪೂರ್ವ ಯೋಜನೆ ರೂಪಿಸಿದ್ದ. ಒಬ್ಬ ವ್ಯಕ್ತಿಯೊಂದಿಗೆ ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು ತಮ್ಮ ಪುತ್ರನೇ ನೋಡಿದ್ದಾಗಿ ತಿಳಿಸಿದ್ದಾನೆ. ಹೀಗಾಗಿ ತನ್ನ ಪತ್ನಿಯ ಕೊಲೆಗೆ ಯೋಜನೆ ರೂಪಿಸಿ, ಜೊತೆಗೆ ಅಮಾನುಷವಾಗಿ ಮಕ್ಕಳು, ಅಜ್ಜಿಯನ್ನು ಕೂಡ ಕೊಂದಿದ್ದಾನೆ.

ಎಲ್ಲಾ ಮೃತದೇಹಗಳನ್ನು ವಿವಿಧ ಕೊಠಡಿಗಳಲ್ಲಿ ಇರಿಸಿದ ಆರೋಪಿ, ರಕ್ತದ ಕಲೆಗಳಿಂದ ತೇವಗೊಂಡಿದ್ದ ನೆಲವನ್ನು ಸ್ವಚ್ಛಗೊಳಿಸಿದ್ದಾನೆ. ನಂತರ ಆರೋಪಿ ಎಸ್ಕೇಪ್ ಆಗಿದ್ದ. ಅಹಮದಾಬಾದ್ ಕ್ರೈಂ ಬ್ರಾಂಚ್ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...