alex Certify ಪತಿಗೆ ಬಂದ 1.36 ಕೋಟಿ ರೂ. ಹಣ ಕದ್ದು ಪ್ರಿಯಕರನ ಜತೆ ಮೂರು ಮಕ್ಕಳ ತಾಯಿ ಎಸ್ಕೇಪ್….​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಗೆ ಬಂದ 1.36 ಕೋಟಿ ರೂ. ಹಣ ಕದ್ದು ಪ್ರಿಯಕರನ ಜತೆ ಮೂರು ಮಕ್ಕಳ ತಾಯಿ ಎಸ್ಕೇಪ್….​!

ಥಾಯ್ಲೆಂಡ್​: ಇಲ್ಲಿಯ ಪತಿಯೊಬ್ಬ ತನಗೆ 6 ಮಿಲಿಯನ್ ಬಹ್ತ್ (ಸುಮಾರು 1.36 ಕೋಟಿ ರೂಪಾಯಿ) ಹಣ ಲಾಟರಿಯಲ್ಲಿ ಸಿಕ್ಕಿತೆಂದು ಖುಷಿಯಲ್ಲಿ ಮುಳುಗಿರುವಾಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ಅಷ್ಟೂ ಹಣವನ್ನು ಲಪಾಟಿಸಿರುವ ಪತ್ನಿ, ತನ್ನ ಪ್ರಿಯಕರನ ಜತೆ ಓಡಿ ಹೋಗಿದ್ದಾಳೆ. ಈಗ ಕೈಯಲ್ಲಿ ದುಡ್ಡಿಲ್ಲದೇ ಪತಿರಾಯ ಗೋಳೋ ಎನ್ನುತ್ತಿದ್ದಾನೆ.

ಥಾಯ್ಲೆಂಡ್​ನ ರೋಯಿ ಎಟ್‌ನ ಇಸಾನ್ ಪ್ರಾಂತ್ಯದ ನಿವಾಸಿಯಾದ ಮನಿತ್ ಅವರು ಇದೇ 1ರಂದು 6 ಮಿಲಿಯನ್ ಬಹ್ತ್ ಮೌಲ್ಯದ ಲಾಟರಿಯನ್ನು ಗೆದ್ದಿದ್ದರು. ತೆರಿಗೆ ಕಡಿತದ ನಂತರ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ 5,970,000 ಬಹ್ತ್ ಪಡೆದರು.

ಪತಿಗೆ ಲಾಟರಿ ಹೊಡೆಯುತ್ತಲೇ ಪತ್ನಿ ಸಂತಸದಿಂದ ಬೀಗಿದಳು. ಪತಿಯನ್ನು ಪುಸಲಾಯಿಸಿದಳು. ಆಕೆಯನ್ನು ನಂಬಿದ ಪತಿ ಅಷ್ಟೂ ಹಣವನ್ನು ತನ್ನ ಹೆಂಡತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದನು. ಆದರೆ ಚಾಲಾಕಿ ಪತ್ನಿ ಅಂಗಕನಾರತ್ ಎಲ್ಲ ಹಣದೊಂದಿಗೆ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ.

ದಿಗ್ಭ್ರಮೆಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದು, ತನಗೆ 26 ವರ್ಷಗಳ ಹಿಂದೆ ತನ್ನ ಪತ್ನಿಯೊಂದಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ನನ್ನ ಬಳಿ ಲಾಟರಿ ಹಣ ಬಿಟ್ಟು ಏನೂ ಇರಲಿಲ್ಲ ಎಂದು ಗೋಳೋ ಎಂದಿದ್ದಾನೆ. ಆಕೆಯ ಫೋನ್​ಗೆ ಟ್ರೈ ಮಾಡುತ್ತಿದ್ದರೂ ಸ್ವಿಚ್​ ಆಫ್​ ಆಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...