alex Certify ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ವಿಚಿತ್ರ ರೀತಿ ‘ಔಟ್’​ ಆದ ಹರ್ಮನ್​ ಪ್ರೀತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ವಿಚಿತ್ರ ರೀತಿ ‘ಔಟ್’​ ಆದ ಹರ್ಮನ್​ ಪ್ರೀತ್​

ಟೀಂ ಇಂಡಿಯಾ ವನಿತೆಯರ ಟಿ 20 ಅಂತಾರಾಷ್ಟ್ರೀಯ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ ಯಾಕೋ ಅದೃಷ್ಟ ಚೆನ್ನಾಗಿಲ್ಲ ಎಂದೆನಿಸುತ್ತಿದೆ.

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಪಂದ್ಯದ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಂದ ಹರ್ಮನ್​ಪ್ರೀತ್​ ಕೌರ್​​ ರನೌಟ್​ ಆದ ರೀತಿ ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿದ್ದಂತೂ ಸುಳ್ಳಲ್ಲ. ಬ್ಯಾಟ್​ನಿಂದ ಚೆಂಡನ್ನು ತಳ್ಳಿದ ಬಳಿಕ ಕೊಂಚ ಯಾಮಾರಿದ್ದಕ್ಕೆ ಹರ್ಮನ್​ಪ್ರೀತ್​ ಕೌರ್​ ತಮ್ಮ ವಿಕೆಟ್​ ಕಳೆದುಕೊಂಡಿದ್ದಾರೆ.

ಕ್ವೀನ್​ ಸ್ಟೌನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ವಿಕೆಟ್​ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ. ನ್ಯೂಜಿಲೆಂಡ್​​ ಐದು ಪಂದ್ಯಗಳ ಏಕದಿನ ಪಂದ್ಯದ ಸರಣಿಯಲ್ಲಿ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಬ್ಯಾಟಿಂಗ್​​ಗೆ ಇಳಿದಿದ್ದ ಹರ್ಮನ್​​ಪ್ರೀತ್​ ಕೌರ್​​ ಫ್ರಾನ್ಸಿಸ್​​ ಮ್ಯಾಕೆ ಎಸೆತವನ್ನು ಎದುರಿಸುತ್ತಿದ್ದರು. ತಮ್ಮೆದುರು ಬಂದ ಚೆಂಡಿಗೆ ಹರ್ಮನ್​ಪ್ರೀತ್​ ಕೌರ್​ ಬ್ಯಾಟು ಬೀಸಿದ ರಭಸಕ್ಕೆ ಚೆಂಡು ನೇರವಾಗಿ ಬೌಲರ್​​ ಫ್ರಾನ್ಸಿಸ್​ ಕೈಗೆ ತಲುಪಿತು. ಇದಾದ ಬಳಿಕ ಕ್ರೀಸ್​ಗೆ ಮರಳದ ಹರ್ಮನ್​ಪ್ರೀತ್​ ಕೌರ್​​​ ಕ್ರೀಸ್​ ಹೊರಗೆ ನಿಂತಿದ್ದರು.

ಕೂಡಲೇ ಅಲರ್ಟ್ ಆದ ಫ್ರಾನ್ಸಿಸ್​ ತಮ್ಮ ಕೈಲಿದ್ದ ಚೆಂಡನ್ನು ವಿಕೆಟ್​ ಕೀಪರ್​ಗೆ ಪಾಸ್​ ಮಾಡಿದ್ದಾರೆ. ಚೆಂಡು ಸಿಗುತ್ತಿದ್ದಂತೆಯೇ ಕೀಪರ್​ ಸ್ಟಂಪ್​ಗೆ ಚೆಂಡನ್ನು ತಾಗಿಸುವ ಮೂಲಕ ಕ್ರೀಸ್​ ಹೊರಗಿದ್ದ ಹರ್ಮನ್​ ಪ್ರೀತ್​ ಕೌರ್​ರನ್ನು ಅತ್ಯಂತ ಸುಲಭವಾಗಿ ರನೌಟ್​ ಮಾಡಿದ್ದಾರೆ.

— amazon prime video IN (@PrimeVideoIN) February 18, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...