alex Certify ನೋವಿನಲ್ಲಿದ್ದ ಬಾಲಕನ ಮೊಗದಲ್ಲಿ ನಗು ಮೂಡಿಸಲು ಅಗ್ನಿಶಾಮಕದಳದ ಸಿಬ್ಬಂದಿಯ ನೃತ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋವಿನಲ್ಲಿದ್ದ ಬಾಲಕನ ಮೊಗದಲ್ಲಿ ನಗು ಮೂಡಿಸಲು ಅಗ್ನಿಶಾಮಕದಳದ ಸಿಬ್ಬಂದಿಯ ನೃತ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್..!

ಸೂರು ಕಳೆದುಕೊಂಡ ನೋವಿನಲ್ಲಿದ್ದ ಪುಟ್ಟ ಬಾಲಕನ ಮೊಗದಲ್ಲಿ ಮಂದಹಾಸ ಅರಳಲು ಅಗ್ನಿಶಾಮಕ ಸಿಬ್ಬಂದಿಗಳ ಗುಂಪು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಬ್ರೆಜಿಲ್‌ನ ರಿಯೊ ಡಿ ಜನೈರೊ ರಾಜ್ಯದ ಪರ್ವತ ಪ್ರದೇಶದ ಮೂಲಕ ನುಗ್ಗಿದ ಮಣ್ಣಿನ ಕುಸಿತದಿಂದಾಗಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಮನೆಯನ್ನು ಕಳೆದುಕೊಂಡಿದ್ದಾನೆ ಪುಟ್ಟ ಬಾಲಕ. ಹೀಗಾಗಿ ಬಾಲಕನನ್ನು ಹುರಿದುಂಬಿಸುವ ಸಲುವಾಗಿ ಅಗ್ನಿಶಾಮಕ ಸಿಬ್ಬಂದಿ ನೃತ್ಯ ಮಾಡಿದ್ದು, ಹೃದಯವಂತಿಕೆ ಮೆರೆದಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯ ಗುಂಪು ನೋಮ್ ಎಂದು ಗುರುತಿಸಲಾದ ಬಾಲಕನ ಸುತ್ತಲೂ ನೃತ್ಯ ಮಾಡಿದ್ದು, ನಗು ಮೂಡಿಸಲು ಪ್ರಯತ್ನಿಸಿದ್ದಾರೆ. ನಿಧಾನಕ್ಕೆ ನೋಮ್ ತನ್ನ ನೆಚ್ಚಿನ ಆಟಿಕೆಯನ್ನು ಬಿಗಿಯಾಗಿ ಹಿಡಿದುಕೊಂಡು ನೃತ್ಯವನ್ನು ಆನಂದಿಸುತ್ತಿರುವಂತೆ ತೋರುತ್ತಾನೆ.

ಕಳೆದ ತಿಂಗಳು ಬ್ರೆಜಿಲ್‌ನಲ್ಲಿ ಸಂಭವಿಸಿದ ಪ್ರವಾಹ ಮತ್ತು ಮಣ್ಣಿನ ಕುಸಿತದ ಪರಿಣಾಮವಾಗಿ ನೋಮ್ ಮತ್ತು ಆತನ ಕುಟುಂಬವು ತಮ್ಮ ಮನೆಯನ್ನು ಕಳೆದುಕೊಂಡಿದೆ. ತುಂಬಾ ನೋವು ಮತ್ತು ಹತಾಶೆಯ ನಡುವೆ ಹೊಸ ಆರಂಭದ ಭರವಸೆಯನ್ನು ನೀಡುತ್ತದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳ ಇಂತಹ ಅದ್ಭುತ ಕೆಲಸಕ್ಕೆ ಕೆಲವು ಬಳಕೆದಾರರು ಸಂತೋಷಪಟ್ಟರೆ, ಇನ್ನು ಕೆಲವರು ಪುಟ್ಟ ನೋಮ್ ಮತ್ತು ಅವರ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ.

— GoodNewsCorrespondent (@GoodNewsCorres1) March 1, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...