alex Certify ನೋಡನೋಡುತ್ತಿದ್ದಂತೆ ಚಿನ್ನದ ಆಭರಣ ಕದ್ದ ಡೆಲಿವರಿ ಏಜೆಂಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ಚಿನ್ನದ ಆಭರಣ ಕದ್ದ ಡೆಲಿವರಿ ಏಜೆಂಟ್…!

ಡೆಲಿವರಿ ಏಜೆಂಟ್​ಗಳ ಕುರಿತಾದ ಸಾಕಷ್ಟು ಘಟನೆಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದರಲ್ಲಿ ಕೆಲವು ಘಟನೆಗಳು ಒಳ್ಳೆಯ ವಿಚಾರಗಳನ್ನು ಒಳಗೊಂಡಿರುತ್ತದೆ. ಅಪರಿಚಿತರ ಜೀವವನ್ನು ಉಳಿಸುವುದರಿಂದ ಹಿಡಿದು ಗ್ರಾಹಕರ ಪ್ಯಾಕೇಜ್​ಗಳನ್ನು ಕದ್ದು ತಿನ್ನುವವರೆಗೆ ನಿಮಗೆ ನಾನಾ ಮನಸ್ಥಿತಿಯ ಡೆಲಿವರಿ ಏಜೆಂಟ್​ಗಳ ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ.

ಚಿನ್ನಾಭರಣ ಅಂಗಡಿಯಿಂದ ಮಹಿಳೆಯೊಬ್ಬರು ಆಭರಣವನ್ನು ಕದಿಯುತ್ತಿರುವ ದೃಶ್ಯಾವಳಿಯು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೋ ವೈರಲ್​ ಆದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆನ್​ಲೈನ್​ನಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕ್ಯಾಲಿರ್ಫೋನಿಯಾದಲ್ಲಿ ಪಿಸ್ಮೋ ಬೀಚ್​​ನಲ್ಲಿರುವ ಬ್ಯೂಟಿ ಸಲೂನ್​ ಕಡೆಗೆ ಡೆಲಿವರಿ ಏಜೆಂಟ್​​ ತೆರಳುತ್ತಿರೋದನ್ನು ಕಾಬಹುದಾಗಿದೆ.

ಆದರೆ ವಾಪಸ್​ ಬರುವ ವೇಳೆಯಲ್ಲಿ ಮಹಿಳೆಯ ಕೈಯಲ್ಲಿ ಆಭರಣ ಇರುವುದನ್ನು ಕಾಣಬಹುದಾಗಿದೆ. ಬೂದು ಬಣ್ಣದ ಟೀ ಶರ್ಟ್​ ಧರಿಸಿದ್ದ ಮಹಿಳಾ ಡ್ರೈವರ್​​ ಮುಖ್ಯ ದ್ವಾರದಿಂದ ಒಳಗೆ ಪ್ರವೇಶಿಸಿ ಪ್ಯಾಕೇಜ್​ನ್ನು ಮತ್ತೊಬ್ಬ ಮಹಿಳೆಗೆ ನೀಡಿದ್ದಾಳೆ.

ಆ ಸ್ಥಳದಲ್ಲಿ ಮಹಿಳೆಯ ಸುತ್ತಮುತ್ತ ಇತರೆ ಯಾವುದೇ ವ್ಯಕ್ತಿ ಅಥವಾ ಸಿಬ್ಬಂದಿ ಇರಲಿಲ್ಲ. ಈ ಸಮಯದ ಲಾಭ ಪಡೆದುಕೊಂಡ ಮಹಿಳೆಯು ಆಭರಣದ ಸಣ್ಣ ತುಂಡನ್ನು ಪಾಕೆಟ್​ನಲ್ಲಿ ಇಟ್ಟುಕೊಂಡಿದ್ದಾಳೆ. ವರದಿಗಳ ಪ್ರಕಾರ ಮಹಿಳೆಯು ಅಂಗಡಿಯಿಂದ ನೆಕ್​ಲೇಸ್​ ಕದ್ದಿದ್ದಳು ಎನ್ನಲಾಗಿದೆ.

ಈ ಘಟನೆ ಸಂಬಂಧ ಉದ್ಯಮಿ ಮೆಲಿಯಾನಾ ಸಿಸಿ ಟಿವಿ ದೃಶ್ಯಾವಳಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...