alex Certify ನೈಗ್ಲೇರಿಯಾ ಫೌಲೆರಿ: ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೊಂದು ಮಗು ಬಲಿ; ಏನಿದು ವಿಚಿತ್ರ ಕಾಯಿಲೆ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಗ್ಲೇರಿಯಾ ಫೌಲೆರಿ: ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೊಂದು ಮಗು ಬಲಿ; ಏನಿದು ವಿಚಿತ್ರ ಕಾಯಿಲೆ?

ಇತ್ತೀಚಿನ ದಿನಗಳಲ್ಲಿ ಮೆದುಳಿನ ಸೋಂಕಿನಿಂದ ಹಲವರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಮೆದುಳು ತಿನ್ನಿವ ಅಮೀಬಾ ಸೋಂಕಿಗೆ ಮಕ್ಕಳು ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ನೈಗ್ಲೇರಿಯಾ ಫೌಲೆರಿ ಎಂಬ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಸಾವನ್ನಪ್ಪಿದ್ದ. ಇದೀಗ ಇಂತದ್ದೇ ಮತ್ತೊಂದು ಘಟನೆ ಅಮೆರಿಕದಲ್ಲಿ ನಡೆದಿದ್ದು, 2 ವರ್ಷದ ಪುಟ್ಟ ಮಗು ಈ ಸೋಂಕಿಗೆ ಬಲಿಯಾಗಿದೆ.

ಅಮೆರಿಕಾದ ನೆವಾಡಾದ ಎರಡು ವರ್ಷದ ಮಗು ಕೆಲ ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿತ್ತು. ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಮಗುವಿಗೆ ನೈಗ್ಲೇರಿಯಾ ಫೌಲೆರಿ ಸೋಂಕು ತಗುಲಿದೆ ಎಂಬುದು ಗೊತ್ತಾಗಿದೆ. ಮಗುವನ್ನು ಉಳಿಸಲು ವೈದ್ಯರು ಹರಸಾಹಸಪಟ್ಟಾಗ್ಯೂ ಮಗು ಸಾವನ್ನಪ್ಪಿದೆ. ಈ ಆಘಾತಕಾರಿ ಘಟನೆ ಹಾಗೂ ಮೆದುಳು ತಿನ್ನುವ ಅಮೀಬಾ ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.

ಈ ಪ್ರಕರಣದಲ್ಲಿ ಮಗು ನೀರಿನಲ್ಲಿ ಆಟವಾಡುತ್ತಿದ್ದಾಗ ಸೋಂಕು ಮೂಗು, ಬಾಯಿ ಅಥವಾ ಕಿವಿಗಳ ಮೂಲಕವಾಗಿ ದೇಹವನ್ನು ಪ್ರವೇಶಿಸಿರಬಹುದು ಎನ್ನಲಾಗಿದೆ.

ಏನಿದು ನೈಗ್ಲೇರಿಯಾ ಫೌಲೆರಿ ಮೆದುಳು ತಿನ್ನುವ ಸೋಂಕು ?

ನೈಗ್ಲೇರಿಯಾ ಫೌಲೆರಿ ಎಂಬುದು ನದಿ ಹಾಗೂ ಸರೋವರ ಸಿಹಿನೀರಿನಲ್ಲಿ ಕಂಡುಬರುವ ಅಮೀಬಾ. ಇದು ಮೂಗು, ಬಾಯಿ ಮೂಲಕವಾಗಿ ದೇಹವನ್ನು ಪ್ರವೇಶಿಸಿದಾಗ ಸೋಂಕು ಮೆದುಳಿನ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಇದು ಅಪರೂಪದ್ದೆನಿಸಿದ್ದರೂ ಮಾರಣಾಂತಿಕ ಸೋಂಕು. ಈ ಸೋಂಕು ದೇಹ ಪ್ರವೇಶಿಸಿ 12 ದಿನಗಳ ಬಳಿಕ ಜ್ವರದಂತಹ ಲಕ್ಷಣ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ರೋಗ ಲಕ್ಷಣ ಕಾಣಿಸಿಕೊಂಡ 18 ದಿನಗಳಲ್ಲಿ ರೋಗಿ ಸಾವನ್ನಪ್ಪಬಹುದು.

ಲಕ್ಷಣಗಳು:

ತೀವ್ರ ಜ್ವರ
ವಾಕರಿಕೆ
ತಲೆ ಮುಂಭಾಗದಲ್ಲಿ ನೋವು
ಕೋಮಾ ಸ್ಥಿತಿಗೆ ಹೋಗುವುದು ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...