alex Certify ನೆಟ್ಟಿಗರನ್ನು ತಲ್ಲಣಗೊಳಿಸಿದೆ ಈ ಬೀದಿಬದಿ ವ್ಯಾಪಾರಿಯ ವಿಶೇಷ ಮಾವಿನ ಹಣ್ಣಿನ ಮ್ಯಾಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ತಲ್ಲಣಗೊಳಿಸಿದೆ ಈ ಬೀದಿಬದಿ ವ್ಯಾಪಾರಿಯ ವಿಶೇಷ ಮಾವಿನ ಹಣ್ಣಿನ ಮ್ಯಾಗಿ..!

ಬೇಸಿಗೆ ಕಾಲ ಅಂದ್ರೆ ನೆನಪಾಗೋದು ರುಚಿಯಾದ ಮಾವಿನಹಣ್ಣುಗಳು. ಮಾವಿನ ಹಣ್ಣಿನ ಲಸ್ಸಿ, ಜ್ಯೂಸ್ ಮಾತ್ರವಲ್ಲದೆ ತಿನ್ನಲೂ ಕೂಡ ಅಷ್ಟೇ ರುಚಿ. ಆದರೆ, ಈ ಬೀದಿಬದಿ ವ್ಯಾಪಾರಿ ತಯಾರಿಸಿರುವ ಹೊಸ ರುಚಿ ವಿಡಿಯೋ ನೋಡಿದ್ರೆ, ನಿಮಗೆ ವಾಕರಿಕೆ ಬರದೆ ಇರಲಾರದು.

ದಿ ಗ್ರೇಟ್ ಇಂಡಿಯನ್ ಫುಡೀ ಎಂಬ ಫುಡ್ ವ್ಲೋಗಿಂಗ್ ಪುಟದ ಮೂಲಕ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನೀವು ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ ಕೇಳಿರಬಹುದು. ಆದರೆ, ಮಾವಿನ ಹಣ್ಣಿನ ಮ್ಯಾಗಿಯನ್ನು ಎಂದಾದ್ರೂ ಕೇಳಿದ್ದೀರಾ..? ವ್ಯಾಪಾರಿಯೊಬ್ಬರು ವಿಶಿಷ್ಟ ಶೈಲಿಯ ಮ್ಯಾಂಗೋ ಮಾಜಾ ಮ್ಯಾಗಿ ತಯಾರಿಸಿದ್ದಾರೆ.

ಮಹಿಳೆ ಮ್ಯಾಗಿ ತಯಾರಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮ್ಯಾಗಿ ತಯಾರಿಸುವ ಪ್ರಕ್ರಿಯೆಯ ಸಮಯದಲ್ಲಿ ಆಕೆ ಬಹಳಷ್ಟು ಮಾಜಾವನ್ನು ಸೇರಿಸುತ್ತಾಳೆ. ನಂತರ ಕತ್ತರಿಸಿದ ಮಾವಿನಹಣ್ಣಿನ ತುಂಡುಗಳೊಂದಿಗೆ ಆಕೆ ಮಾಜಾ ಮ್ಯಾಗಿ ಭಕ್ಷ್ಯವನ್ನು ಬಡಿಸುತ್ತಾಳೆ.

ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ವಿಭಿನ್ನ ಶೈಲಿಯ ಭಕ್ಷ್ಯ ಕಂಡು ನೆಟ್ಟಿಗರು ಗಾಬರಿಗೊಂಡಿದ್ದಾರೆ. ಕೆಲವರು ತಮ್ಮ ನೆಚ್ಚಿನ ಹಣ್ಣನ್ನು ಮ್ಯಾಗಿಯಲ್ಲಿ ಏಕೆ ಸೇರಿಸಲಾಗಿದೆ ಎಂದು ಗರಂ ಆಗಿ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...