alex Certify ಆರೋಗ್ಯಕರ ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….?

ನುಗ್ಗೇಕಾಯಿ ಪೋಷಕಾಂಶಗಳ ಕಣಜ ಎಂಬುದು ನಿಮಗೆ ತಿಳಿದಿರಬಹುದು. ಅದರೆ ಅದರ ಸೊಪ್ಪಿನಲ್ಲೂ ಹೇರಳವಾದ ಔಷಧೀಯ ಗುಣಗಳಿವೆ.

ನುಗ್ಗೆ ಸೊಪ್ಪನ್ನು ಸಾರು, ಪಲ್ಯ, ರೊಟ್ಟಿಯ ರೂಪದಲ್ಲಿ ನಾವು ಸೇವಿಸಬಹುದು. ಹಸಿಯಿದ್ದಾಗ ಕಹಿ ಎನಿಸಿದರೂ ಬೇಯಿಸಿದ ಬಳಿಕ ವಿಶಿಷ್ಟ ರುಚಿ ಕೊಡುವ ಈ ಸೊಪ್ಪು ನಿಮ್ಮ ಹಿತ್ತಲಲ್ಲೇ ಇದ್ದರೆ ತಡ ಮಾಡದಿರಿ.

ನುಗ್ಗೆ ಸೊಪ್ಪು ಮುಳುಗುವವರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಚಿಟಿಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಬೆರೆಸಿ ಮಿಶ್ರಣ ತಯಾರಿಸಿ. ಈ ಕಷಾಯವನ್ನು ಕುಡಿಯಿರಿ. ಇದರಲ್ಲಿ ಐರನ್, ವಿಟಮಿನ್ಸ್ ಹಾಗೂ ಮಿನರಲ್ ಗಳು ಹೇರಳವಾಗಿ ಸಿಗುತ್ತವೆ. ಕ್ಯಾರೆಟ್ ನ ಹತ್ತು ಪಟ್ಟು ಹೆಚ್ಚು ವಿಟಮಿನ್ ಎ ಇದರಲ್ಲಿದೆ ಎನ್ನಲಾಗಿದೆ.

ನುಗ್ಗೆಸೊಪ್ಪಿನ ಕಷಾಯ ನಿತ್ಯ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಶ್ವಾಸಕೋಶ ಮತ್ತು ಯಕೃತ್ ಸಮಸ್ಯೆ ನಿವಾರಣೆಗೆ ಇದು ಉಪಕಾರಿ. ಥೈರಾಯ್ಡ್ ಸಮಸ್ಯೆಯನ್ನೂ ಇದು ನಿಯಂತ್ರಿಸುತ್ತದೆ. ರಕ್ತಹೀನತೆ ಸಮಸ್ಯೆ ಕಾಡದಂತೆಯೂ ಇದು ನೋಡಿಕೊಳ್ಳುತ್ತದೆ.

ಈ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಚಟ್ನಿ ಪುಡಿ ರೂಪದಲ್ಲೂ ಸೇವಿಸಬಹುದು. ಇದು ಆರಂಭದಲ್ಲಿ ಕಹಿ ಎನಿಸಿದರೂ ಕ್ರಮೇಣ ಅಭ್ಯಾಸ ಮಾಡಿಕೊಂಡರೆ ತಿನ್ನಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...