alex Certify ನಿಸರ್ಗ ಸೌಂದರ್ಯ, ವಾಸ್ತುಕಲೆಯ ಅಪೂರ್ವ ಸಂಗಮ ‘ಮಹಾಬಲಿಪುರಂ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಅಪೂರ್ವ ಸಂಗಮ ‘ಮಹಾಬಲಿಪುರಂ’

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ.

ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ಇಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಸುಂದರವಾದ ಕಡಲ ತೀರ, ಬಂಡೆಗಳಲ್ಲಿ ಕೊರೆದ ದೇವಾಲಯಗಳು, ಕೋಟೆ, ಗುಹೆಗಳ ಶಿಲ್ಪಕಲೆ ಮತ್ತು ಕಲಾತ್ಮಕತೆಗೆ ನೀವು ಮಾರುಹೋಗದೆ ಇರಲಾರಿರಿ.

ಮಹಾಬಲಿಪುರಂನಲ್ಲಿ ಅನೇಕ ಗುಹಾಂತರ ದೇವಾಲಯಗಳಿವೆ. ಬಂಡೆಗಳನ್ನು ಕೊರೆದು ನಿರ್ಮಿಸಿರುವ ದೇವಾಲಯಗಳಲ್ಲಿ ಮಹಿಷಾಸುರ ಮರ್ದಿನಿ ಗುಹೆ ವೈಶಿಷ್ಟ್ಯವಾಗಿದೆ. ಬೇರೆ ಗುಹೆಗಳು ಕೂಡ ಸುಂದರವಾಗಿವೆ.

ತಿಮಿಂಗಿಲ ಆಕಾರದಲ್ಲಿ ಬೃಹತ್ ಬಂಡೆಯನ್ನು ಕೆತ್ತಲಾಗಿದ್ದು, ಬಾಸ್ ರಿಲೀಫ್ ಎಂದು ಕರೆಯಲ್ಪಡುವ ಇದರ ಮೇಲೆ ದೇವತೆಗಳು, ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ.

ಮಹಾಬಲಿಪುರಂನ ಪ್ರಮುಖ ಆಕರ್ಷಣೆ ಎಂದರೆ ಪಂಚ ರಥಗಳು. ಪಾಂಡವರ ಹೆಸರಿನಿಂದ ಕರೆಯಲ್ಪಡುವ ರಥಗಳನ್ನು ವಿಭಿನ್ನ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಆಕರ್ಷಕವಾಗಿವೆ. ಕೃಷ್ಣ ಮಂಟಪದಲ್ಲಿ ಕೃಷ್ಣನ ಲೀಲೆಗಳನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದ್ದು, ಆಕರ್ಷಕವಾಗಿವೆ.

ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಶೋರ್ ಟೆಂಪಲ್ ಪ್ರಾಚೀನ ದೇವಾಲಗಳಲ್ಲಿ ಒಂದಾಗಿದೆ. ಸಮುದ್ರ ದಂಡೆಯ ಮೇಲೆ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ಸುಂದರವಾಗಿದೆ.

ಇದರೊಂದಿಗೆ ನೋಡಬಹುದಾದ ಸ್ಥಳ ಕ್ರೊಕೋಡೈಲ್ ಬ್ಯಾಂಕ್. ಇಲ್ಲಿ ವಿವಿಧ ಜಾತಿಯ ಸಾವಿರಾರು ಮೊಸಳೆಗಳಿವೆ. ಟೈಗರ್ ಕೇವ್, ಮುತ್ತುಕಾಡು, ಪಕ್ಷಿಧಾಮ, ಗೋಲ್ಡನ್ ಬೀಚ್ ಮೊದಲಾದ ನೋಡಬಹುದಾದ ಸ್ಥಳಗಳು ಇಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...