alex Certify ನಿಮ್ಮ ಈ ತಪ್ಪುಗಳಿಂದ ಫೇಲಾಗಬಹುದು ಕಿಡ್ನಿ, ಇರಲಿ ಎಚ್ಚರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಈ ತಪ್ಪುಗಳಿಂದ ಫೇಲಾಗಬಹುದು ಕಿಡ್ನಿ, ಇರಲಿ ಎಚ್ಚರ…!

ಕಿಡ್ನಿಗಳನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಹದಲ್ಲಿ ಇರುವ ಎರಡೂ ಕಿಡ್ನಿಗಳಿಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಆದ್ದರಿಂದ ಅವುಗಳ ಬಗ್ಗೆ ಕಾಳಜಿ ವಹಿಸಲೇಬೇಕು. ಯಾವುದೇ ವಯಸ್ಸಿನಲ್ಲಿ ಅವು ಹಾನಿಗೊಳಗಾದರೆ ಜೀವಕ್ಕೆ ಅಪಾಯಕಾರಿ.ಸಾಮಾನ್ಯವಾಗಿ ಮಧುಮೇಹ, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಿದ್ದರೆ ನಮ್ಮ ಮೂತ್ರಪಿಂಡಗಳು ತುಂಬಾ ಬಳಲುತ್ತವೆ.

ಮೂತ್ರಪಿಂಡಗಳ ಆರೋಗ್ಯಕ್ಕಾಗಿ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಲಾಗುತ್ತದೆ, ಅದರ ಸಹಾಯದಿಂದ ಅಲ್ಬುಮಿನ್ ಎಂಬ ಪ್ರೋಟೀನ್ ಪತ್ತೆಯಾಗುತ್ತದೆ, ಇದು ಆರೋಗ್ಯಕರ ಮೂತ್ರಪಿಂಡಗಳಲ್ಲಿ ಇರುವುದಿಲ್ಲ. ಮೂತ್ರಪಿಂಡದ ಕೆಲಸ ನಮ್ಮ ದೇಹದ ದ್ರವಗಳನ್ನು ಫಿಲ್ಟರ್ ಮಾಡುವುದು. ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ದೇಹದಲ್ಲಿ ಸರಿಯಾದ ಪ್ರಮಾಣದ ನೀರನ್ನು ಇಡುವುದು ಅವಶ್ಯಕ. ಇದು ಕಿಡ್ನಿ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿಡ್ನಿ ವೈಫಲ್ಯದಿಂದ ಹೇಗೆ ಪಾರಾಗಬಹುದು ಎಂಬುದನ್ನು ತಿಳಿಯೋಣ.

ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟುವ ಮಾರ್ಗಗಳು

ಕಿಡ್ನಿಗಳು ಚೆನ್ನಾಗಿರಬೇಕೆಂದರೆ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಿ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಿ. ರಕ್ತದೊತ್ತಡವನ್ನು ಕಾಪಾಡಿಕೊಳ್ಳಿ ಏಕೆಂದರೆ ಇದು ಮೂತ್ರಪಿಂಡದ ಆರೋಗ್ಯಕ್ಕೆ ಮೊದಲ ಹೆಜ್ಜೆಯಾಗಿದೆ. ಮಧುಮೇಹಿಗಳು ಹೆಚ್ಚು ಅಪಾಯದಲ್ಲಿರುವ ಕಾರಣ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಿ.ದೈನಂದಿನ ಆಹಾರದಲ್ಲಿ ಆರೋಗ್ಯಕರ ಪದಾರ್ಥಗಳನ್ನು  ಮಾತ್ರ ಸೇರಿಸಿ. ಇದು ಆರೋಗ್ಯದ ಮೂಲ ಮಂತ್ರವಾಗಿದೆ.

ನೀರಿನ ಸೇವನೆಯು ತುಂಬಾ ಕಡಿಮೆ ಅಥವಾ ಅತಿಯಾಗಿರಲು ಬಿಡಬೇಡಿ. ಇದು ಮೂತ್ರಪಿಂಡಗಳಿಗೆ ಫಿಲ್ಟರ್ ಮಾಡುವಲ್ಲಿ ತೊಂದರೆ ಉಂಟುಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ  ಪ್ರತಿದಿನ 2 ರಿಂದ 3 ಲೀಟರ್ ನೀರು ಕುಡಿಯಬೇಕು.ನಿಮ್ಮ ತೂಕ ಹೆಚ್ಚಾಗಲು ಬಿಡಬೇಡಿ, ಸಾಧ್ಯವಾದಷ್ಟು, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಿಮ್ಮ ದೈನಂದಿನ ಉಪ್ಪು ಸೇವನೆಯನ್ನು ನಿಯಂತ್ರಿಸಿ, ಏಕೆಂದರೆ ಅದು ಬಿಪಿಯನ್ನು ಹೆಚ್ಚಿಸುತ್ತದೆ.

ವೈದ್ಯರ ಪ್ರಕಾರ ದಿನಕ್ಕೆ 4 ಗ್ರಾಂ ಉಪ್ಪನ್ನು ಮಾತ್ರ ಸೇವಿಸಬೇಕು.ಹದಗೆಡುತ್ತಿರುವ ಜೀವನಶೈಲಿಯನ್ನು ಬದಲಾಯಿಸಿ ಮತ್ತು ಸರಿಯಾದ ದಿನಚರಿಯನ್ನು ಅನುಸರಿಸಿ.ತಾಜಾ ಆಹಾರವನ್ನು ಮಾತ್ರ ತಿನ್ನಲು ಪ್ರಯತ್ನಿಸಿ, ಹಳಸಿದ ಆಹಾರವು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ. ಸಿಗರೇಟ್, ಬೀಡಿ, ಹುಕ್ಕಾ ಅಥವಾ ಇನ್ಯಾವುದೇ ರೀತಿಯ ಚಟಗಳು ಮೂತ್ರಪಿಂಡಕ್ಕೆ ಹಾನಿ ಮಾಡುತ್ತವೆ. ಕೆಲವು ಔಷಧಿಗಳಿಂದಲೂ ಮೂತ್ರಪಿಂಡಗಳಿಗೆ ಹಾನಿಯಾಗಬಹುದು, ಆದ್ದರಿಂದ ಅವುಗಳನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಕಿಡ್ನಿ ಹಾಳಾಗಲು ಮದ್ಯ ಸೇವನೆಯೇ ಪ್ರಮುಖ ಕಾರಣ, ಈ ಚಟವನ್ನು ಬಿಟ್ಟುಬಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...