alex Certify ನಿಮಗೆ ತಿಳಿದಿರಲಿ ರಂಗೋಲಿ ಕುರಿತ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ತಿಳಿದಿರಲಿ ರಂಗೋಲಿ ಕುರಿತ ಈ ಮಾಹಿತಿ

ರಂಗವಲ್ಲಿಯನ್ನ ರಂಗೋಲಿ ಎಂದೂ ಕರೆಯುವುದುಂಟು. ಮುಂಜಾನೆ ಪ್ರತಿ ಮನೆಯ ಮುಂದೆ ನಗುವ ರಂಗವಲ್ಲಿ ಶುಭ ಸೂಚಕ. ಮನೆಯ ಅಂಗಳದ ಅಂದ ಹೆಚ್ಚಿಸುವ ರಂಗೋಲಿಯಲ್ಲಿ ಚುಕ್ಕಿ ರಂಗೋಲಿ, ಎಳೆ ರಂಗೋಲಿ ಎಂಬ ವಿಧಗಳಿವೆ.

ರಂಗೋಲಿಯನ್ನು ಬರೆಯುವಾಗ ಒಬ್ಬೊಬ್ಬರು ಒಂದೊಂದು ವಸ್ತುವನ್ನು ಬಳಸುತ್ತಾರೆ. ರಂಗೋಲಿ ಹಿಟ್ಟು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ರಂಗೋಲಿಯ ಮಹತ್ವ ಹೆಚ್ಚು. ಜೊತೆಗೆ ರಂಗೋಲಿ ಬರೆಯಲು ಬಳಸುವ ವಸ್ತುವೂ ಮುಖ್ಯ.

ಹಿಂದೆಲ್ಲಾ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಬರೆಯುತ್ತಿದ್ದರು. ಕಾರಣ ಇಷ್ಟೇ. ಅಕ್ಕಿ ಹಿಟ್ಟಿನಿಂದ ರಂಗೋಲಿ ಬರೆದರೆ ಮನೆಯ ಮುಂಭಾಗ ಸುಂದರವಾಗಿ ಕಾಣುವುದಲ್ಲದೆ ಅಂಗಳದಲ್ಲಿ ಇರುವ ಸಣ್ಣ ಸಣ್ಣ ಕ್ರಿಮಿಗಳಿಗೆ ಈ ಅಕ್ಕಿ ಹಿಟ್ಟು ಆಹಾರವಾಗಲಿ ಎಂಬ ಸದುದ್ದೇಶ ಇದರ ಹಿಂದೆ ಇತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...