alex Certify ನಿಮಗೂ 100 ವರ್ಷ ಬದುಕುವ ಆಸೆಯಿದ್ಯಾ…..? ಇಲ್ಲಿದೆ ನೋಡಿ ‘ದೀರ್ಘಾಯುಷ್ಯ’ದ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೂ 100 ವರ್ಷ ಬದುಕುವ ಆಸೆಯಿದ್ಯಾ…..? ಇಲ್ಲಿದೆ ನೋಡಿ ‘ದೀರ್ಘಾಯುಷ್ಯ’ದ ಗುಟ್ಟು

ಸಾವು ಅನ್ನೋದು ಎಂಥವರನ್ನೂ ಕಂಗೆಡಿಸುವ ಸಂಗತಿ. ಇನ್ನಷ್ಟು ವರ್ಷ ಬದುಕಬೇಕು ಎಂಬ ಆಸೆ ಸಹಜ. ಶತಾಯುಷಿ, ದೀರ್ಘಾಯುಷಿ ಆಗಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ನೀವು ಕೂಡ 100 ವರ್ಷ ಬದುಕಬೇಕು ಎಂದುಕೊಂಡಿದ್ದರೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ನಾವು ಏನು ತಿನ್ನುತ್ತೇವೆ ಮತ್ತು ಏನನ್ನು ತಿನ್ನುವುದಿಲ್ಲ ಎಂಬುದರ ಮೇಲೆ ನಮ್ಮ ರೋಗರಹಿತ ಬದುಕು ಅವಲಂಬಿಸಿದೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿವಿ ಪ್ರೊಫೆಸರ್ ವಾಲ್ಟರ್ ಲಾಂಗೊ ಮತ್ತು ರೋಜಲಿನ್ ಆಂಡರ್ಸನ್ ಸಂಶೋಧನೆಯೊಂದನ್ನು ಮಾಡಿದ್ದಾರೆ. ಮನುಷ್ಯರ ದೀರ್ಘಾಯುಷ್ಯಕ್ಕೆ ಸೂಕ್ತವಾದ ಆಹಾರಗಳು ಯಾವುದು ? ದಿನಕ್ಕೆ ಎಷ್ಟು ಕ್ಯಾಲೊರಿಗಳನ್ನು ತೆಗೆದುಕೊಳ್ಳಬೇಕು ?  ಎಷ್ಟು ಸಮಯ ಮತ್ತು ಎಷ್ಟು ಬಾರಿ ಉಪವಾಸ ಮಾಡಬೇಕು ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ.

ನಾವು ನೀವೆಲ್ಲ ನಿತ್ಯ ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ ಇರುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರೋಟೀನ್ ಮಾತ್ರ ತೆಗೆದುಕೊಳ್ಳಿ. ಈ ಪ್ರೋಟೀನ್‌ನ ಹೆಚ್ಚಿನ ಭಾಗವನ್ನು ನಾವು ಸಸ್ಯಗಳು ಮತ್ತು ಮರಗಳಿಂದ ಪಡೆಯುವ ಅಂತಹ ಆಹಾರದಿಂದ ತೆಗೆದುಕೊಳ್ಳಬೇಕು.ಯಾಕಂದ್ರೆ ಈ ರೀತಿ ಸಸ್ಯಜನ್ಯ ಆಹಾರ ಸೇವನೆಯಿಂದ ಸಿಗುವ ಫ್ಯಾಟ್‌, ದೇಹಕ್ಕೆ ಬೇಕಾದ ಶೇ.30ರಷ್ಟು ಶಕ್ತಿಯನ್ನು ಒದಗಿಸುತ್ತದೆ.

ದೀರ್ಘಾಯುಷ್ಯಕ್ಕಾಗಿ, ನೀವು ಸಾಕಷ್ಟು ದ್ವಿದಳ ಧಾನ್ಯಗಳು, ಎಲ್ಲಾ ರೀತಿಯ ಧಾನ್ಯಗಳು, ತರಕಾರಿಗಳು ಮತ್ತು ಸ್ವಲ್ಪ ಪ್ರಮಾಣದಲ್ಲಿ ಮೀನನ್ನು ತಿನ್ನಬೇಕೆಂದು ಸಂಶೋಧಕರು ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರೆಡ್‌ ಮೀಟ್‌ ಸೇವನೆ ಮಾಡಬೇಡಿ. ಬಿಳಿ ಮಾಂಸವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಸಕ್ಕರೆಯನ್ನು ಕೂಡ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.

ಡ್ರೈ ಫ್ರೂಟ್‌ಗಳಾದ ಗೋಡಂಬಿ, ಬಾದಾಮಿ, ವಾಲ್‌ನಟ್‌ಗಳನ್ನು ಸಾಕಷ್ಟು ಸೇವನೆ ಮಾಡಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಡಾರ್ಕ್ ಚಾಕೊಲೇಟ್ ಅನ್ನು ತಿನ್ನಬಹುದು. ಇವನ್ನೆಲ್ಲ ನಿಮ್ಮ ಮನಸ್ಸಿಗೆ ಬಂದಾಗ ತಿನ್ನುವುದಲ್ಲ. 11 ರಿಂದ 12 ಗಂಟೆಗಳ ನಡುವೆ ಆಹಾರ ಸೇವಿಸಬೇಕು. ಉಳಿದ 12 ಗಂಟೆ ಉಪವಾಸ ಮಾಡಬಹುದು. ಪ್ರತಿ 3-4 ತಿಂಗಳಿಗೊಮ್ಮೆ 5 ದಿನ ಉಪವಾಸ ಮಾಡುವುದರಿಂದದ ಯಾವುದೇ ರೋಗ ಬರದಂತೆ ತಡೆಯಬಹುದು ಎನ್ನುತ್ತಾರೆ ಸಂಶೋಧಕರು.

ಯಾವ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು ಅನ್ನೋ ಬಗ್ಗೆ ಈ ಸಂಶೋಧನೆಯಲ್ಲಿ ವಿವರವಾಗಿ ಹೇಳಿಲ್ಲ. ಯಾವುದೇ ವ್ಯಕ್ತಿ ತನ್ನ ಆರೋಗ್ಯ ಮತ್ತು ವಯಸ್ಸನ್ನು ಗಮನದಲ್ಲಿಟ್ಟುಕೊಂಡು ದೀರ್ಘಾಯುಷ್ಯಕ್ಕೆ ಮೂಲವಾಗಿರೋ ಈ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹಂತ ಹಂತವಾಗಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದಕ್ಕಿಂತ ಈಗಿರುವ ಆಹಾರ ಕ್ರಮದಲ್ಲಿ ತಕ್ಷಣ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...