alex Certify ‘ನಾವು ಹಿಂದಿ ದ್ವೇಷಿಗಳಲ್ಲ, ಹಿಂದಿ ಹೇರಿಕೆಯ ದ್ವೇಷಿಗಳು’: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾವು ಹಿಂದಿ ದ್ವೇಷಿಗಳಲ್ಲ, ಹಿಂದಿ ಹೇರಿಕೆಯ ದ್ವೇಷಿಗಳು’: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಹೇಳಿಕೆ

ಮೋಝಿಪುರ( ಭಾಷೆಗಾಗಿ ಸಮರ) ಹುತಾತ್ಮರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ 1967ರಲ್ಲಿ ಅಣ್ಣಾ( ಸಿಎನ್​​ ಅಣ್ಣಾದೊರೈ) ಅಧಿಕಾರಕ್ಕೆ ಬಂದ ಸಮಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತಂದು ರಾಜ್ಯಕ್ಕೆ ತಮಿಳುನಾಡು ಎಂದು ಹೆಸರಿಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯ ಭಾಷೆಗಳನ್ನು ರಾಷ್ಟ್ರದ ಅಧಿಕೃತ ಭಾಷೆಗಳನ್ನಾಗಿ ಮಾಡುವ ಕಾನೂನುಗಳನ್ನು ತಿದ್ದುಪಡಿ ಮಾಡಲು ನಾವಿಂದಿಗೂ ಹೆಣಗಾಡುತ್ತಿದ್ದೇವೆ ಎಂದು ಸಿಎಂ ಎಂಕೆ ಸ್ಟಾಲಿನ್​ ಹೇಳಿದರು.

ನಾವು ತಮಿಳು ಎಂದು ಹೇಳಿದ ಮಾತ್ರಕ್ಕೆ ನಾವೆಲ್ಲ ಸಂಕುಚಿತ ಮನಸ್ಸಿನವರು ಎಂದರ್ಥವಲ್ಲ. ಹಿಂದಿ ಮಾತ್ರವಲ್ಲ, ನಾವು ಯಾವುದೇ ಭಾಷೆಯನ್ನು ವಿರೋಧಿಸುವವರಲ್ಲ ಎಂದು ಸಿಎಂ ಸ್ಟಾಲಿನ್​ ಹೇಳಿದ್ದಾರೆ.

ನಾವು ಹಿಂದಿಯನ್ನು ವಿರೋಧಿಸುವುದಿಲ್ಲ. ಆದರೆ ಹಿಂದಿ ಹೇರಿಕೆಯನ್ನು ಖಂಡಿತವಾಗಿಯೂ ವಿರೋಧಿಸುತ್ತೇವೆ. ನಾವು ತಮಿಳನ್ನು ಪ್ರೀತಿಸುತ್ತೇವೆ ಎಂದ ಮಾತ್ರಕ್ಕೆ ನಾವು ಬೇರೆ ಭಾಷೆಗಳನ್ನು ದ್ವೇಷಿಸುತ್ತೇವೆ ಎಂದು ಅರ್ಥವಲ್ಲ ಎಂದು ಸ್ಟಾಲಿನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...