alex Certify ನಾಳೆ ಶಿವಮೊಗ್ಗದಲ್ಲಿ ‘ಕಿಯಾ’ ಕಾರುಗಳ ರ್ಯಾಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಶಿವಮೊಗ್ಗದಲ್ಲಿ ‘ಕಿಯಾ’ ಕಾರುಗಳ ರ್ಯಾಲಿ

ಕಿಯಾ ಕಾರುಗಳು ಬಿಡುಗಡೆಗೊಂಡ ಬಳಿಕ ಭರ್ಜರಿ ಯಶಸ್ಸು ಸಾಧಿಸಿವೆ. ಕಾರು ಪ್ರಿಯರು ಅವುಗಳ ವೈಶಿಷ್ಟ್ಯತೆಗೆ ಮಾರು ಹೋಗಿ ಖರೀದಿಗೆ ಮುಂದಾಗುತ್ತಿದ್ದಾರೆ. ಇದರ ಮಧ್ಯೆ ಶಿವಮೊಗ್ಗದಲ್ಲಿ ನಾಳೆ ಕಿಯಾ ಕಾರುಗಳ ರ್ಯಾಲಿ ನಡೆಯುತ್ತಿದೆ.

ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಜಾನ್ಸಿ ಕಿಯಾ ಶೋ ರೂಮ್ ಮೂರು ಲಕ್ಷ ಸೆಲ್ಟಾಸ್ ಕಾರುಗಳ ಮಾರಾಟದ ದಾಖಲೆ ನಿರ್ಮಿಸಿದ್ದು, ಈ ಹಿನ್ನೆಲೆಯಲ್ಲಿ ಅಂದು ನೂರು ಕಾರುಗಳ ರ್ಯಾಲಿ ನಡೆಯಲಿದೆ

ಬೆಳಗ್ಗೆ ಬೈಪಾಸ್ ರಸ್ತೆಯ ಶೋರೂಮ್ ನಿಂದ ಈ ರ್ಯಾಲಿ ಹೊರಡಲಿದ್ದು, ಎಂ ಆರ್ ಎಸ್, ಅಮೀರ್ ಅಹ್ಮದ್ ಸರ್ಕಲ್, ಗೋಪಿ ಸರ್ಕಲ್, ಉಷಾ ನರ್ಸಿಂಗ್ ಹೋಮ್, ವಿನೋಬನಗರದ ಮೂಲಕ ಸಾಗರ ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಆವರಣ ತಲುಪಲಿದೆ.

ಅಲ್ಲಿ ಗ್ರಾಹಕರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು, ಜೊತೆಗೆ ವಾಹನದ ಬಿಡಿ ಭಾಗಗಳ ಪ್ರದರ್ಶನ ಇರಲಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...