alex Certify ನಾಗರಹಾವಿನ ಜೊತೆ ಎದೆ ಝಲ್​ ಎನ್ನಿಸುವ ಸಾಹಸ ಮಾಡಿದ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗರಹಾವಿನ ಜೊತೆ ಎದೆ ಝಲ್​ ಎನ್ನಿಸುವ ಸಾಹಸ ಮಾಡಿದ ಯುವಕ…!

ನಾಗರಹಾವನ್ನು ಅತ್ಯಂತ ಅಪಾಯಕಾರಿ ಹಾವುಗಳ ಸಾಲಿನಲ್ಲಿ ಇರಿಸಲಾಗುತ್ತದೆ. ನಾಗರಹಾವಿನ ಚಲನೆಯನ್ನು ಊಹೆ ಮಾಡೋಕೂ ಸಾಧ್ಯವಿಲ್ಲ. ತನ್ನ ಬೇಟೆಗಾಗಿ ಎಷ್ಟು ದೂರ ಬೇಕಿದ್ದರೂ ಕ್ರಮಿಸಬಲ್ಲ ಈ ಹಾವು ಬಲಿಪಶುವಿಗೆ ತನ್ನ ಮಾರಣಾಂತಿಕ ವಿಷವನ್ನು ಚುಚ್ಚುತ್ತದೆ. ನಾಗರಹಾವಿನ ವಿಷ ದೇಹಕ್ಕೆ ಏರಿದರೆ ಬದುಕೋದು ಬಹಳ ಕಷ್ಟ. ಹೀಗಾಗಿ ಸಾಮಾನ್ಯವಾಗಿ ಜನತೆ ನಾಗರಹಾವಿನಿಂದ ಅಂತರವನ್ನು ಕಾಯ್ದುಕೊಳ್ತಾರೆ.

ಆದರೆ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರಹಾವನ್ನು ಕೈಯಲ್ಲಿ ಹಿಡಿದು ಸಾಹಸ ತೋರಿದ್ದು ನೆಟ್ಟಿಗರು ಇದನ್ನು ನೋಡಿ ಹುಬ್ಬೇರಿಸಿದ್ದಾರೆ. ಅಲ್ಲದೇ ಹಾವಿನ ಎದುರು ಈ ಆಟ ಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ.

ಅರ್ಥ್‌ಪಿಕ್ಸ್ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್​ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋದಲ್ಲಿ ವೃತ್ತಿಯಲ್ಲಿ ವಿಜ್ಞಾನಿ ಎಂದು ಹೇಳಿಕೊಳ್ಳುವ ಮೈಕ್ ಹೋಲ್‌ಸ್ಟನ್, ನಾಗರಹಾವಿನ ಬಾಲವನ್ನು ಹಿಡಿದು ನಿಭಾಯಿಸುತ್ತಿರುವುದನ್ನು ಕಾಣಬಹುದಾಗಿದೆ.

https://www.youtube.com/shorts/OtVWYfa2dDY

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...