alex Certify ನಟ ದೀಪ್​ ಸಿಧು ಸಾವಿನ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪ್ರೇಯಸಿ ಜೊತೆಗಿನ ಫೋಟೋ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ದೀಪ್​ ಸಿಧು ಸಾವಿನ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪ್ರೇಯಸಿ ಜೊತೆಗಿನ ಫೋಟೋ…..!

ಪಂಜಾಬಿ ನಟ ದೀಪ್​ ಸಿಧು ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 38 ವರ್ಷದ ದೀಪ್​ ಸಿಧು ಕಳೆದ ವರ್ಷ ನಡೆದ ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ದೀಪ್​ ಸಿಧು ಜೊತೆಯಲ್ಲಿ ಅವರ ಪ್ರೇಯಸಿ ರೀನಾ ರೈ ಕೂಡ ಇದ್ದರು ಎಂದು ವರದಿಯಾಗಿದೆ. ಈ ಡೆಡ್ಲಿ ಅಪಘಾತಕ್ಕೂ ಕೇವಲ ಒಂದು ದಿನ ಮೊದಲು ಇಬ್ಬರು ಜೊತೆಯಾಗಿ ವ್ಯಾಲೆಂಟೈನ್ಸ್​ ಡೇ ಆಚರಿಸಿದ್ದರು. ರೀನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ ಫೋಟೋವನ್ನು ಹಂಚಿಕೊಂಡಿದ್ದರು. ಅಪಘಾತಕ್ಕೂ ಮುನ್ನ ದೀಪ್​ ಸಿಧು ಕ್ಲಿಕ್ಕಿಸಿಕೊಂಡ ಕೊನೆಯ ಫೋಟೋ ಇದಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಪ್ರಸ್ತುತ ವೈರಲ್​ ಆಗುತ್ತಿರುವ ಫೋಟೋದಲ್ಲಿ ದೀಪ್​ ಹಾಗೂ ರೀನಾ ಮಿರರ್​ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದ ರೀನಾ ಹ್ಯಾಪಿ ವ್ಯಾಲೆಂಟೈನ್ಸ್​ ಡೇ ಎಂದು ಬರೆದುಕೊಂಡಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...