alex Certify ನಟಿ ಪೂಜಾ ರಮೇಶ್ ಗೆ ಡಾಕ್ಟರೇಟ್ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಪೂಜಾ ರಮೇಶ್ ಗೆ ಡಾಕ್ಟರೇಟ್ ಗೌರವ

ಮಿಸ್ ಇಂಡಿಯಾ 2021 ರ ಕಿರೀಟ ಮುಡಿಗೇರಿಸಿಕೊಂಡ ಕನ್ನಡದ ನಟಿ ಪೂಜಾ ರಮೇಶ್ ಮತ್ತೊಂದು ಸಾಧನೆ ಮಾಡಿದ್ದಾರೆ. ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ, ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರವಷ್ಟೇ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಆಯೋಜನೆ ಮಾಡಿದ್ದ, ಫ್ಯಾಶನ್ ಶೋನಲ್ಲಿ ಮಿಸ್ ಇಂಡಿಯಾ 2021 ಟೈಟಲ್ ವಿನ್ನರ್ ಆಗಿದ್ದರು ಪೂಜಾ ರಮೇಶ್.

ಈಗ ASIA VEDIC CULTURE ACADEMY ಸಂಸ್ಥೆಯಿಂದ ಡಾಕ್ಟರೇಟ್ ಲಭಿಸಿದೆ. ಈಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಟಿ ಪೂಜಾ ರಮೇಶ್ ಅವರ ಈ ಸಾಧನೆಗೆ ಅವರ ಪ್ರತಿಭೆ, ಪರಿಶ್ರಮ, ತಂದೆ-ತಾಯಿ ಹಾಗೂ ಹಿರಿಯ ಕಲಾವಿದರ ಆಶೀರ್ವಾದ ಕಾರಣವೆಂದಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಹಲವು ಹಿರಿಯ ಕಲಾವಿದರ ಮನೆಗೆ ಹೋಗಿ ನೆರವು ನೀಡಿದ್ದ ಪೂಜಾಗೆ ಕಲಾವಿದರ ಆಶೀರ್ವಾದ ಸಿಕ್ಕಿತ್ತು, ಇತ್ತೀಚೆಗೆ ರಾಜ್ಯದ ಸಾಧಕರ ಸಾಧನೆ ಪಟ್ಟಿಯಲ್ಲಿ ಮಹಿಳಾ ಸಾಧಕಿ ಪ್ರಶಸ್ತಿ ಕೂಡ ಪೂಜೆಗೆ ದೊರಕಿದೆ. ಪೂಜಾ ರಮೇಶ್, ಪೇಪರ್ ದೋಣಿ, ಲಹರಿ, ತಾಂಡವ ಮಹಾಕಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2015ರಿಂದ ಚಿತ್ರರಂಗದಿಂದ ದೂರವಿದ್ದ ಪೂಜಾ, ಕಿರುತೆರೆ ಹಾಗೂ ಹಿರಿತೆರೆಯತ್ತ ಮುಖ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...