alex Certify ನಕಲಿ ನಂದಿನಿ ತುಪ್ಪ ಮಾರಾಟ ತಡೆಯಲು ಕೆಎಂಎಫ್ ನಿಂದ ಮಹತ್ವದ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ನಂದಿನಿ ತುಪ್ಪ ಮಾರಾಟ ತಡೆಯಲು ಕೆಎಂಎಫ್ ನಿಂದ ಮಹತ್ವದ ಹೆಜ್ಜೆ

ಬೆಂಗಳೂರು: ಇತ್ತೀಚೆಗಷ್ಟೇ ಮೈಸೂರಿನ ಹೊಸಹುಂಡಿಯಲ್ಲಿ ನಂದಿನಿ ನಕಲಿ ತುಪ್ಪ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ್ದ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ ನಂದಿನಿ ನಕಲಿಯಾಗಿ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ ನಂದಿನಿ ತುಪ್ಪದ ಪ್ಯಾಕೆಟ್ ಗಳ ಮೇಲೆ ಹೊಲೊಗ್ರಾಂ ಹಾಗೂ ಕ್ಯೂಆರ್ ಕೋಡ್ ನಮೂದಿಸಲು ಮುಂದಾಗಿದೆ.

ಅಲ್ಲಿ ಡಾಲ್ಡಾ, ಪಾಮ್ ಆಯಿಲ್, ರಾಸಾಯನಿಕ ಬಣ್ಣ ಬಳಸಿ ನಕಲಿಯಾಗಿ ನಂದಿನಿ ತುಪ್ಪವನ್ನು ತಯಾರಿಸಲಾಗುತ್ತಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕರ್ನಾಟಕ ಹಾಲು ಮಹಾ ಮಂಡಳಿ ಎಚ್ಚೆತ್ತುಕೊಂಡು ಈ ನಿರ್ಧಾರಕ್ಕೆ ಬಂದಿದೆ.

BIG NEWS: ‘ಸಿ.ಟಿ.ರವಿ ಅಲ್ಲ, ಪಟಾಕಿ ರವಿ’; ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕಾಲೆಳೆದ ಡಿ.ಕೆ.ಶಿವಕುಮಾರ್

ಹೀಗಾಗಿ ಜನರಿಗ ಶುದ್ಧ ತುಪ್ಪ ಒದಗಿಸುವ ನಿಟ್ಟಿನಲ್ಲಿ ಕೆಎಂಎಫ್ ಹೊಸ ಹೆಜ್ಜೆ ಇಟ್ಟಿದೆ. ಅಲ್ಲದೇ, ರಾಜ್ಯದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ನಂದಿನಿ ಮಾದರಿಗಳನ್ನು ಪಡೆದು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಅಲ್ಲದೇ, ಗ್ರಾಹಕರಿಗಾಗಿ ಟೋಲ್ ಫ್ರೀ ನಂಬರ್ 18004258030ಗೆ ಕರೆ ಮಾಡಿ ತಿಳಿಸುವಂತೆ ಕೂಡ ಕೆಎಂಎಫ್ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...