alex Certify BIG NEWS: ‘ಸಿ.ಟಿ.ರವಿ ಅಲ್ಲ, ಪಟಾಕಿ ರವಿ’; ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕಾಲೆಳೆದ ಡಿ.ಕೆ.ಶಿವಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಸಿ.ಟಿ.ರವಿ ಅಲ್ಲ, ಪಟಾಕಿ ರವಿ’; ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕಾಲೆಳೆದ ಡಿ.ಕೆ.ಶಿವಕುಮಾರ್

ಬೆಳಗಾವಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಟಾಕಿ ರವಿ, ಏನೋ ಒಂದು ಪಟಾಕಿ ಹಚ್ಚಿ ಬಿಡ್ತಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಎಂಇಎಸ್ ಪುಂಡಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ, ಡಿಕೆಶಿ ಇದರ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಎಂದು ಆರೋಪ ಮಾಡಿದ್ದ ಸಿ.ಟಿ.ರವಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪಟಾಕಿ ರವಿ ಏನೋ ಒಂದ್ ಪಟಾಕಿ ಹಚ್ಚಿ ಬಿಡ್ತಾನೆ. ಆತ ಸಿ.ಟಿ.ರವಿಲ್ಲ, ಪಟಾಕಿ ರವಿ. ಆ ಪಟಾಕಿ ರವಿಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

ಬ್ಯಾಟ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ಮತ್ತೊಂದು ವಿಶೇಷ ಗೌರವ

ಎಂಇಎಸ್ ಬಗ್ಗೆ ಕಾಂಗ್ರೆಸ್ ಡಬಲ್ ಸ್ಟ್ಯಾಂಡ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ್ಯಾರೋ ತಲೆ ಕೆಟ್ಟೋರು ಮಾಡ್ತಾರೆ. 4-5 ಜನ ಕಿಡಿಗೇಡಿ ಕೃತ್ಯ ಮಾಡಿದ ತಕ್ಷಣ ನಾವು ಬಿಜೆಪಿಗರು ಮಾಡಿದ್ದು ಎನ್ನಲಾಗುತ್ತಾ ಎಂದು ತಿರುಗೇಟು ನೀಡಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಅಶಾಂತಿ ಮೂಡಿಸಲು ಕಾಯ್ದೆ ತರುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಮಾಡ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ರಾಜ್ಯಕ್ಕೆ ಕಪ್ಪು ಚುಕ್ಕೆ. ಕಾಯ್ದೆಯನ್ನು ನಾವು ವಿರೋಧಿಸುತ್ತೇವೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...