alex Certify ದುಬಾರಿ ಬೆಲೆಯ ಬೆಕ್ಕು ಕಳ್ಳತನ; ಪೊಲೀಸರಿಗೆ ದೂರು ಕೊಟ್ಟ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಬೆಲೆಯ ಬೆಕ್ಕು ಕಳ್ಳತನ; ಪೊಲೀಸರಿಗೆ ದೂರು ಕೊಟ್ಟ ಮಾಲೀಕ

ಬೆಂಗಳೂರು : ಇಲ್ಲೊಬ್ಬ ವ್ಯಕ್ತಿ ಬೆಕ್ಕು ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿಯ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವವರೇ ಈ ರೀತಿ ಬೆಕ್ಕು ಕಳೆದಿದೆ ಎಂದು ದೂರು ದಾಖಲಿಸಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದು ಪರ್ಷಿಯನ್ ಬೆಕ್ಕಾಗಿದ್ದು, ಭಾರೀ ಬೆಲೆಯನ್ನು ಹೊಂದಿದೆ ಎನ್ನಲಾಗಿದೆ. ಹೀಗಾಗಿ ಮನೆಯಿಂದ ಯಾರೋ ಬೆಕ್ಕನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಇದರೊಂದಿಗೆ ಬೆಕ್ಕು ಹುಡುಕಿ ಕೊಟ್ಟವರಿಗೆ 35 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಕೂಡ ಘೋಷಿಸಿದ್ದಾರೆ. ಇವರು ತಮ್ಮ ಮನೆಯಲ್ಲಿ ಬೆಕ್ಕಿನೊಂದಿಗೆ ಮೊಲವನ್ನು ಕೂಡ ಸಾಕಿದ್ದಾರೆ. ಸದ್ಯ ಮೊಲ ಏಕಾಂಗಿಯಾಗಿದ್ದು, ಮಾಲೀಕರು, ಪೊಲೀಸರ ಎದುರು ಕಣ್ಣೀರು ಸುರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...