alex Certify ದುಬಾರಿ ಬೆಲೆಗೆ ಹರಾಜಾದ ಮತ್ತೊಬ್ಬ ಯುವ ಕ್ರಿಕೆಟಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಬೆಲೆಗೆ ಹರಾಜಾದ ಮತ್ತೊಬ್ಬ ಯುವ ಕ್ರಿಕೆಟಿಗ

ಆಸ್ಟ್ರೇಲಿಯಾ ತಂಡದಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿ ಸ್ಟಾರ್ ಆಲ್ ರೌಂಡರ್ ಆಗಿ ಮಿಂಚುತ್ತಿರುವ 23 ವಯಸ್ಸಿನ ಕ್ಯಾಮೆರಾನ್ ಗ್ರೀನ್ ಇಂದು ನಡೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 17.5 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ಇದಕ್ಕೂ ಮುಂಚೆ ಇಂಗ್ಲೆಂಡ್ ನ ಸ್ಯಾಮ್ ಕರನ್ ಅವರನ್ನು 18.5 ಕೋಟಿ ರೂಪಾಯಿ ಗೆ ಪಂಜಾಬ್ ಪ್ರಾಂಚೈಸಿ ಖರೀದಿಸಿತ್ತು. ಈ ಮೂಲಕ ಸ್ಯಾಮ್ ಕರನ್ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರಾಗಿದ್ದಾರೆ.

ಕಳೆದ ಬಾರಿಯ ಕಳಪೆ ಪ್ರದರ್ಶನದಿಂದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿರುವ ಮುಂಬೈ ಇಂಡಿಯನ್ಸ್ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ.

ಇಂಗ್ಲೆಂಡ್ ನ ಯುವ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ಕೂಡ ಈಗಾಗಲೇ 11.25 ಕೋಟಿ ರೂಪಾಯಿಗೆ ಹರಾಜಾಗಿದ್ದು, ಹೈದ್ರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್‌ ಮನ್ ವಿಕೆಟ್ ಕೀಪರ್, ನಿಕೋಲಸ್ ಪೂರನ್ 16 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೆಂಟ್ಸ್ ತಂಡದ ಪಾಲಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...