alex Certify ದಿನಕ್ಕೆ 12 ಗಂಟೆ ನಿದ್ರಿಸುವ ಅಖಿಲೇಶ್‌ 6 ಗಂಟೆ ಸ್ನೇಹಿತರ ಜೊತೆ ಮೋಜು ಮಸ್ತಿಯಲ್ಲಿ ಕಳೆಯುತ್ತಾರೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆ 12 ಗಂಟೆ ನಿದ್ರಿಸುವ ಅಖಿಲೇಶ್‌ 6 ಗಂಟೆ ಸ್ನೇಹಿತರ ಜೊತೆ ಮೋಜು ಮಸ್ತಿಯಲ್ಲಿ ಕಳೆಯುತ್ತಾರೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅಖಿಲೇಶ್​ ಯಾದವ್​ ಎಲ್ಲಾ ರೀತಿಯ ಸವಲತ್ತುಗಳನ್ನು ಹೊಂದಿರುವ ವ್ಯಕ್ತಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಅಖಿಲೇಶ್​ ಯಾದವ್ ಹೆಚ್ಚಿನ ಸಮಯ ನಿದ್ದೆಯಲ್ಲಿಯೇ ಕಳೆದಿದ್ದರಿಂದ ಅವರಿಗೆ ಬಿಜೆಪಿ ಸರ್ಕಾರದ ಯೋಜನೆಗಳು ಹಾಗೂ ಕೊರೊನಾ ಲಸಿಕೆ ಅಭಿಯಾನಗಳ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಖಿಲೇಶ್​ ಯಾದವ್​ ದಿನದಲ್ಲಿ 12 ಗಂಟೆ ನಿದ್ರಿಸಿದ್ದಾರೆ ಹಾಗೂ ತಮ್ಮ ಸ್ನೇಹಿತರ ಜೊತೆಯಲ್ಲಿ ಆರು ಗಂಟೆಗಳ ಕಾಲ ಮೋಜು ಮಸ್ತಿ ಮಾಡುತ್ತಾರೆ ಎಂದು ಯೋಗಿ ಆದಿತ್ಯನಾಥ್​ ಲೇವಡಿ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಸಮಾಜವಾದಿ ಪಕ್ಷದ ಮುಖ್ಯಸ್ಥರೇ ತಮ್ಮ ಪಕ್ಷದ ನಾಯಕ ಅಜಂ ಖಾನ್​ ಜೈಲಿನಿಂದ ಹೊರಬರುವುದನ್ನು ಬಯಸುತ್ತಿಲ್ಲ. ಏಕೆಂದರೆ ಅಜಂ ಜೈಲಿನಿಂದ ಹೊರಬಂದರೆ ತಮ್ಮ ಸ್ಥಾನಕ್ಕೆ ಅಪಾಯ ಉಂಟಾಗಬಹುದು ಎಂಬ ಭೀತಿ ಇದಕ್ಕೆ ಕಾರಣ ಎಂದು ಹೇಳುವ ಮೂಲಕ ಅಖಿಲೇಶ್​ ಯಾದವ್​ಗೆ ಪರೋಕ್ಷ ಟಾಂಗ್​ ನೀಡಿದ್ದಾರೆ.

ಅಲ್ಲದೇ ಈ ಬಾರಿಯ ವಿಧಾನಸಭಾ ಚುನಾವಣೆಯ ವಿಚಾರದಲ್ಲಿಯೂ ಮಾತನಾಡಿದ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಿಜೆಪಿಯು ಬಹುಮತಗಳಿಂದ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...