alex Certify ದಿನಕ್ಕೆ ಎರಡೇ ಗಂಟೆ ನಿದ್ರೆ ಮಾಡ್ತಾರೆ ಪ್ರಧಾನಿ ಮೋದಿ…! ರಹಸ್ಯ ಬಿಚ್ಚಿಟ್ಟ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆ ಎರಡೇ ಗಂಟೆ ನಿದ್ರೆ ಮಾಡ್ತಾರೆ ಪ್ರಧಾನಿ ಮೋದಿ…! ರಹಸ್ಯ ಬಿಚ್ಚಿಟ್ಟ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

ಪ್ರಧಾನಿಯಾದಾಗಿನಿಂದ್ಲೂ ನರೇಂದ್ರ ಮೋದಿ ಒಂದು ದಿನವೂ ವಿರಮಿಸಿಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಆದ್ರೀಗ ಮೋದಿ ಪ್ರತಿದಿನ ಕೇವಲ ಎರಡು ಗಂಟೆ ನಿದ್ದೆ ಮಾಡ್ತಿದ್ದಾರಂತೆ. ಈ ಹೊಸ ಪ್ರಯೋಗಕ್ಕೆ ಪ್ರಧಾನಿ ಕೈಹಾಕಿದ್ದಾರೆ ಅಂತಾ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಪ್ರಧಾನಿ ಮೋದಿ ಕೇವಲ ಎರಡು ಗಂಟೆಗಳ ಕಾಲ ನಿದ್ದೆ ಮಾಡ್ತಾರೆ, ಉಳಿದ 22 ಗಂಟೆ ಕೆಲಸ ಮಾಡ್ತಾರೆ. ಪ್ರತಿ ನಿಮಿಷವನ್ನೂ ವ್ಯರ್ಥ ಮಾಡದೆ ದೇಶಕ್ಕಾಗಿ ಹಗಲಿರುಳು ಶ್ರಮಿಸ್ತಿದ್ದಾರೆ ಅಂತಾ ಪಾಟೀಲ್‌ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತ ಹೇಳಿದ್ರು. ನಿದ್ದೆಯ ಮೇಲೆ ನಿಯಂತ್ರಣ ಸಾಧಿಸಲು ಮೋದಿ ಪ್ರಯತ್ನ ನಡೆಸ್ತಿದ್ದಾರಂತೆ.

24 ಗಂಟೆಗಳ ಕಾಲವೂ ಎಚ್ಚರವಿದ್ದು ದೇಶಸೇವೆ ಮಾಡಬೇಕೆಂಬ ಹಂಬಲ ಅವರಿಗಿದೆಯಂತೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಪ್ರಧಾನಿ ಮೋದಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡ್ತಾರೆ, ಹಾಗಾಗಿಯೇ ದೇಶದ ಯಾವುದೇ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಅವರಿಗೆ ಅರಿವಿದೆ ಅಂತಾ ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...