alex Certify ದಾರಿ ತಪ್ಪಿದ ಬಳಿಕ ಗೂಗಲ್ ಮ್ಯಾಪ್ ನಲ್ಲಿ ಮಾರ್ಗ ಹುಡುಕಾಟ; ಎಕ್ಸ್ ಪ್ರೆಸ್‌ವೇಯಲ್ಲಿ ಅಪಘಾತದಿಂದ ಟೆಕ್ಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಬಳಿಕ ಗೂಗಲ್ ಮ್ಯಾಪ್ ನಲ್ಲಿ ಮಾರ್ಗ ಹುಡುಕಾಟ; ಎಕ್ಸ್ ಪ್ರೆಸ್‌ವೇಯಲ್ಲಿ ಅಪಘಾತದಿಂದ ಟೆಕ್ಕಿ ಸಾವು

ದಾರಿ ತಪ್ಪಿದ ಬಳಿಕ ಗೂಗಲ್ ಮ್ಯಾಪ್ ನಲ್ಲಿ ಮಾರ್ಗ ಹುಡುಕುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಟೆಕ್ಕಿ ಸಾವನ್ನಪ್ಪಿದ್ದು ಅವರ ಇಬ್ಬರು ಗೆಳೆಯರು ಗಾಯಗೊಂಡಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಪಿವಿಎನ್‌ಆರ್ ಎಕ್ಸ್ ಪ್ರೆಸ್‌ವೇಯಲ್ಲಿ ತಮ್ಮ ಮೋಟರ್‌ಬೈಕ್‌ನಲ್ಲಿ ಮೂವರು ಸ್ನೇಹಿತರು ಹಿಂತಿರುಗುತ್ತಿದ್ದಾಗ ಅವರು ತಪ್ಪು ದಿಕ್ಕಿನಲ್ಲಿ ಹೋಗುತ್ತಿರುವುದನ್ನು ಅರಿತುಕೊಂಡ ನಂತರ ಅಪಘಾತ ಸಂಭವಿಸಿದೆ.

ಶನಿವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಪೋಚಾರಂನ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚರಣ್ (22) ಸಾವನ್ನಪ್ಪಿದ್ದಾರೆ. ಅವರು ತನ್ನ ಇಬ್ಬರು ಗೆಳೆಯರೊಂದಿಗೆ ಮೋಟರ್ ಬೈಕ್ ನಲ್ಲಿ ತೆರಳುತ್ತಿದ್ದರು. ವಾರಾಂತ್ಯದಲ್ಲಿ ಒಂಬತ್ತು ಮಂದಿ ಸ್ನೇಹಿತರು ಮೂರು ಮೋಟಾರ್ ಬೈಕ್‌ಗಳಲ್ಲಿ ಹೈದರಾಬಾದ್ ನಗರಕ್ಕೆ ಬಂದಿದ್ದರು.

ಪೊಲೀಸರ ಪ್ರಕಾರ ಮೂವರು ಹೊಸ ಸಚಿವಾಲಯದ ಕಟ್ಟಡ ಮತ್ತು ಇತ್ತೀಚೆಗೆ ಸ್ಥಾಪಿಸಲಾದ ಅಂಬೇಡ್ಕರ್ ಪ್ರತಿಮೆಯನ್ನು ನೋಡಲು ಹೋಗಿದ್ದರು. ಟ್ಯಾಂಕ್ ಬಂಡ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಅವರು ಕೇಬಲ್ ಬ್ರಿಡ್ಜ್ ಗೆ ಹೋಗಲು ನಿರ್ಧರಿಸಿದರು. ಆದರೆ ಅವರಿಗೆ ಹೈದರಾಬಾದ್ ನಗರದ ಪರಿಚಯವಿಲ್ಲದ ಕಾರಣ ಅವರು ಗಮ್ಯಸ್ಥಾನವನ್ನು ತಲುಪಲು ತಮ್ಮ ಫೋನ್‌ಗಳಲ್ಲಿ ಗೂಗಲ್ ನಕ್ಷೆಯಲ್ಲಿ ಮಾರ್ಗ ಹುಡುಕಲು ಪ್ರಾರಂಭಿಸಿದರು.

ಈ ವೇಳೆ ಚರಣ್, ಮೆಹದಿಪಟ್ನಂ ಕಡೆಗೆ ಹೊರಟು PVNR ಎಕ್ಸ್ ಪ್ರೆಸ್‌ವೇ ಗೆ ಬಂದರು. ಆದರೆ ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಅವರಿಗೆ ತಿಳಿದಿರಲಿಲ್ಲ.

ಎಕ್ಸ್‌ಪ್ರೆಸ್ ವೇಯಲ್ಲಿ ಮೂರು ಕಿಲೋಮೀಟರ್‌ಗಳನ್ನು ಕ್ರಮಿಸಿದ ನಂತರ, ಮೂವರಿಗೂ ತಾವು ತಪ್ಪು ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಎಂದು ಅರಿತುಕೊಂಡರು. ಚರಣ್ ಪಿಲ್ಲರ್ ನಂಬರ್ 82 ರ ರ್ಯಾಂಿಪ್ ಮೂಲಕ ಕೆಳಗೆ ಇಳಿಯಲು ಬೈಕ್ ತಿರುಗಿಸಿದರು. ಈ ವೇಳೆ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ.

ಚರಣ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಭಾನುವಾರ ಸಾವನ್ನಪ್ಪಿದ್ದಾರೆ. ಅವರ ಇತರ ಇಬ್ಬರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಗರದ ಹೊರವಲಯದಲ್ಲಿರುವ ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕವನ್ನು ಒದಗಿಸಲು 11.6 ಕಿಮೀ ಉದ್ದದ PVNR ಎಕ್ಸ್ ಪ್ರೆಸ್‌ವೇ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಭಾರೀ ವಾಹನಗಳಿಗೆ ಪ್ರವೇಶವಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...