alex Certify ‌ಆರೋಗ್ಯಪೂರ್ಣವಾಗಿ ದಪ್ಪಗಾಗಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಆರೋಗ್ಯಪೂರ್ಣವಾಗಿ ದಪ್ಪಗಾಗಲು ಇಲ್ಲಿದೆ ಟಿಪ್ಸ್

ದಪ್ಪಗಿದ್ದವರು ಸಣ್ಣಗಾಗಲು ಹೆಣಗಿದರೆ, ಸಣ್ಣಗಿದ್ದವರು ದಪ್ಪಗಾಗಲು ಅಷ್ಟೇ ಕಷ್ಟ ಪಡುತ್ತಿರುತ್ತಾರೆ. ಆದರೆ ಕೆಲವು ವಸ್ತುಗಳ ನಿತ್ಯ ಬಳಕೆಯಿಂದ ನೀವು ಆರೋಗ್ಯಪೂರ್ಣವಾಗಿಯೇ ದಪ್ಪವಾಗಬಹುದು. ಹೇಗೆಂದಿರಾ…?

ದಪ್ಪಗಾಗಬೇಕೆಂದು ಕ್ಯಾಲರಿ ಹೆಚ್ಚಿರುವ ಇಲ್ಲವೇ ಸಿಹಿ ಪದಾರ್ಥಗಳನ್ನು ಅತಿಯಾಗಿ ತಿಂದರೆ ದೇಹ ತೂಕದೊಂದಿಗೆ ಮಧುಮೇಹವೂ ಬಳುವಳಿಯಾಗಿ ಬಂದೀತು. ಹಾಗಾಗಿ ಒತ್ತಡವಿಲ್ಲದೆ ಬದುಕುವುದರೊಂದಿಗೆ ಉತ್ತಮ ವ್ಯಾಯಾಮ, ನಿದ್ರೆ, ಕ್ಯಾಲೊರಿ ಪ್ರೊಟೀನ್ ಯುಕ್ತ ಆಹಾರ ಸೇವಿಸುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಿ ದೇಹ ತೂಕ ಹೆಚ್ಚಿಸಬಹುದು.

ಅವುಗಳಿಗೆ ಉತ್ತಮ ಉದಾಹರಣೆ ಎಂದರೆ ಬೇಳೆ ಕಾಳುಗಳು ಮತ್ತು ಧಾನ್ಯಗಳು. ಬ್ರೆಡ್, ಡ್ರೈ ಫ್ರುಟ್ಸ್, ಕ್ಯಾರೆಟ್, ಪಾಲಕ್ ಸೊಪ್ಪು, ಕುಂಬಳಕಾಯಿಯನ್ನು ನಿತ್ಯದ ಆಹಾರದಲ್ಲಿ ಒಂದಿಲ್ಲೊಂದು ರೂಪದಲ್ಲಿ ಬಳಸುವುದು ಬಹಳ ಮುಖ್ಯ.

ದೈಹಿಕ ಶಕ್ತಿಗಾಗಿ ಸ್ನಾಯುಗಳ ಬೆಳವಣಿಗೆಯಾಗಲು ವಾರಕ್ಕೆ ಕನಿಷ್ಠ 4 ರಿಂದ 5 ಬಾರಿ ಜಿಮ್ ಗೆ ಹೋಗಿ. ದೇಹದಿಂದ ವಿಷವನ್ನು ಹೊರಹಾಕಲೆಂದು ಸಾಕಷ್ಟು ನೀರು ಕುಡಿಯಿರಿ. ದೇಹ ತೂಕ ಹೆಚ್ಚಲೆಂದು ಅನಾರೋಗ್ಯಕರ ಆಹಾರ ಅಥವಾ ಜಂಕ್ ಫುಡ್ ಸೇವಿಸದಿರಿ. ಇದರಿಂದ ರೋಗಗಳೂ ಆಕ್ರಮಣ ಮಾಡುತ್ತವೆ. ಅದರ ಬದಲು ಆರೋಗ್ಯಯುಕ್ತ ಆಹಾರಗಳನ್ನು ಸೇವಿಸಿ.

ನಿತ್ಯ ಹಾಲು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀರು ಬೆರಸದ ದಪ್ಪನೆಯ ಹಾಲು ಅತ್ಯುತ್ತಮ. ಇದರಲ್ಲಿ ಕ್ಯಾಲೊರಿಯೊಂದಿಗೆ ಪ್ರೊಟೀನ್, ಕೊಬ್ಬು ಹಾಗೂ ಖನಿಜಾಂಶಗಳಿವೆ. ಇವು ದೇಹದ ಆರೋಗ್ಯವನ್ನೂ ಕಾಪಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...