alex Certify ಥೈರಾಯ್ಡ್ ನಿಯಂತ್ರಣಕ್ಕೆ ರಾಮಬಾಣ ʼತೆಂಗಿನಕಾಯಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ನಿಯಂತ್ರಣಕ್ಕೆ ರಾಮಬಾಣ ʼತೆಂಗಿನಕಾಯಿʼ

ಥೈರಾಯ್ಡ್ ಗ್ರಂಥಿಯು ದೇಹದ ಚಯಾಪಚಯ ಪ್ರಕ್ರಿಯೆಗಳ ಮೇಲೆ ನಿಗಾ ಇಡಲು ಒಂದು ಅವಿಭಾಜ್ಯ ಅಂಗವಾಗಿದೆ. ಇದು ಕತ್ತಿನ ಬುಡದಲ್ಲಿ ಇರುವ ಚಿಟ್ಟೆಯ ಆಕಾರದ ಗ್ರಂಥಿಯಾಗಿದೆ. ಸರಿಯಾದ ಪೋಷಣೆ, ಒತ್ತಡ ಮತ್ತು ಇತರ ಸಮಸ್ಯೆಗಳಂತಹ ಜೀವನಶೈಲಿಯಿಂದಾಗಿ, ಬಹಳಷ್ಟು ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಥೈರಾಯ್ಡ್ ಬಾಧಿಸುತ್ತದೆ. ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಇದರ ನಿಯಂತ್ರಣ ಮಾಡಬಹುದು.

ತೆಂಗಿನಕಾಯಿಯನ್ನು ಅತ್ಯುತ್ತಮ ಥೈರಾಯ್ಡ್ ನಿಯಂತ್ರಕ ಆಹಾರ ಅಂತಾನೇ ಪರಿಗಣಿಸಲಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಅನೇಕ ಪ್ರಯೋಜನಗಳ ಬಗ್ಗೆ ಆಯುರ್ವೇದ ತಜ್ಞೆ ಡಾ.ಡಿಕ್ಸಾ ಭಾವಸರ್ ಅವರು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಾ.ಡಿಕ್ಸಾ ಅವರ ಪ್ರಕಾರ, ತೆಂಗಿನ ಎಣ್ಣೆ, ನೀರು, ಚಟ್ನಿ, ಹಾಲಿನಂತಹ ಯಾವುದೇ ರೂಪದಲ್ಲಿ ತೆಂಗಿನಕಾಯಿಯನ್ನು ಸೇವಿಸಬಹುದು. ಇದು ಆರೋಗ್ಯವನ್ನು ಉತ್ತಮವಾಗಿಸುತ್ತದೆ ಎಂದಿದ್ದಾರೆ.

ಥೈರಾಯ್ಡ್ ನಿಯಂತ್ರಣಕ್ಕೆ ತೆಂಗಿನಕಾಯಿಯ ಪ್ರಯೋಜನಗಳು ಇಲ್ಲಿವೆ:

ತೆಂಗಿನ ಎಣ್ಣೆ

ಡಾ. ಡಿಕ್ಸಾ ಪ್ರಕಾರ, ತೆಂಗಿನ ಎಣ್ಣೆಯು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಯಾವುದೇ ಕ್ಯಾಲೊರಿ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ ಹಾಗೂ ನಿಮ್ಮ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ (ಥೈರಾಯ್ಡ್ ಕಾಯಿಲೆ ಇರುವ ಅನೇಕ ಜನರಲ್ಲಿ ತಮ್ಮ ಆಂತರಿಕ ದೇಹದ ಉಷ್ಣತೆಯಿಂದಾಗಿ ಕೈಗಳು ಮತ್ತು ಪಾದಗಳನ್ನು ತಣ್ಣಗಾಗುತ್ತವೆ.)

ತೆಂಗಿನ ಎಣ್ಣೆಯ ಆರೋಗ್ಯಕರ ಅಂಶವೆಂದ್ರೆ, ಜೀರ್ಣಿಸಿಕೊಳ್ಳಲು ನಿಮಗೆ ಪಿತ್ತರಸ ಲವಣಗಳು ಅಗತ್ಯವಿಲ್ಲ. ತೆಂಗಿನಕಾಯಿ ನಿಮ್ಮ ಕರುಳಿನಿಂದ ನಿಮ್ಮ ಯಕೃತ್ತಿಗೆ ವೇಗವಾಗಿ ಹೋಗುತ್ತದೆ. ಇದು ನಿಮ್ಮ ಕರುಳಿನ ಮೇಲೆ ಮತ್ತು ನಿಮ್ಮ ಯಕೃತ್ತಿನ ಮೇಲೆ ತುಂಬಾ ಸುಲಭವಾಗುತ್ತದೆ. ನಮಗೆ ತಿಳಿದಿರುವಂತೆ ಸರಿಯಾದ ಥೈರಾಯ್ಡ್ ಹಾರ್ಮೋನ್ ಪರಿವರ್ತನೆಗಾಗಿ ಯಕೃತ್ತು ಅಗತ್ಯವಿದೆ.

ತೆಂಗಿನ ನೀರು

ನೀವು ವಾರಕ್ಕೆ 3-4 ಬಾರಿ ತೆಂಗಿನ ನೀರನ್ನು ಕುಡಿಯಬಹುದು (ನಿಮಗೆ ಯಾವುದೇ ಶೀತ ಮತ್ತು ಕೆಮ್ಮು ಸಮಸ್ಯೆಗಳಿಲ್ಲದಿದ್ದರೆ ಮಾತ್ರ) ಎಂದು ಡಾ.ಡಿಕ್ಸಾ ಸಲಹೆ ನೀಡಿದ್ದಾರೆ.

ತೆಂಗಿನಕಾಯಿ ಚಟ್ನಿ

ಇದು ತಿನ್ನಲು ರುಚಿಕರವಾಗಿದ್ದು, ಆರೋಗ್ಯಕ್ಕೂ ಹಿತಕರವಾಗಿದೆ. ನೀವು ಅದನ್ನು ನಿಮ್ಮ ಊಟದ ಜೊತೆಗೆ ಪ್ರತಿದಿನವೂ ಸೇವಿಸಬಹುದು ಎಂದು ಡಾ.ಡಿಕ್ಸಾ ಹೇಳಿದ್ದಾರೆ.

ತೆಂಗಿನಕಾಯಿ ಹಾಲು

ತೆಂಗಿನ ಹಾಲನ್ನು ಮನೆಯಲ್ಲಿಯೇ ತಯಾರಿಸಬಹುದು. ಇದನ್ನು ಬೆಳಿಗ್ಗೆ ಅಥವಾ ಮಲಗುವ ವೇಳೆಯಲ್ಲಿ ಸೇವಿಸಬಹುದು.

ತೆಂಗಿನಕಾಯಿ ಬೆಲ್ಲದ ತುಂಡುಗಳು

ತೆಂಗಿನಕಾಯಿ ಬೆಲ್ಲದ ತುಂಡುಗಳನ್ನು ತಯಾರಿಸುವ ವಿಧಾನ ಬಹಳ ಸುಲಭವಾಗಿದೆ. ಇದನ್ನು ಕೂಡ ನೀವು ಮನೆಯಲ್ಲಿಯೇ ತಯಾರಿಸಿ ಸೇವಿಸಬಹುದು ಎಂದು ಆಯುರ್ವೇದ ತಜ್ಞೆ ಡಾ. ಡಿಕ್ಸಾ ಮಾಹಿತಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...