alex Certify ಥಟ್ಟಂತ ರೆಡಿಯಾಗುತ್ತೆ ʼಕಡಲೇಕಾಯಿʼ ಚಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುತ್ತೆ ʼಕಡಲೇಕಾಯಿʼ ಚಾಟ್

ಚಾಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಸಂಜೆ ವೇಳೆ ಏನಾದರೂ ಚಾಟ್ ತಿನ್ನಬೇಕು ಎಂಬ ಆಸೆ ಅಗುತ್ತದೆ. ಆದರೆ ತಿನ್ನುವುದಕ್ಕೆ ಭಯವಾಗುತ್ತೆ. ಎಲ್ಲಿ ತೂಕ ಹೆಚ್ಚಾಗುತ್ತೋ ಎಂಬ ಅಂಜಿಕೆ ಕೆಲವರಿಗಾದರೆ ಇನ್ನು ಕೆಲವರಿಗೆ ಮನೆಯಲ್ಲಿ ಮಾಡುವುದು ಹೇಗೆ ಎಂಬ ಚಿಂತೆ. ಸುಲಭವಾಗಿ ಮನೆಯಲ್ಲಿ ಕಡಲೇಕಾಯಿ ಚಾಟ್ ಮಾಡುವುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.

ಬೇಕಾಗುವ ಸಾಮಗ್ರಿಗಳು-1 ಕಪ್-ಬೇಯಿಸಿಟ್ಟುಕೊಂಡ ಕಡಲೇಕಾಯಿ, ½ ಟೀ ಸ್ಪೂನ್ ಅರಿಶಿನ, 2 ಕಪ್ ನೀರು, 1 ಟೀ ಸ್ಪೂನ್ ಉಪ್ಪು, ½ ಚಮಚ ಚಾಟ್ ಮಸಾಲ, 1 ದೊಡ್ಡ ಚಮಚ ಈರುಳ್ಳಿ ಸಣ್ಣಗೆ ಹೆಚ್ಚಿದ್ದು, ಖಾರದ ಪುಡಿ-1/4 ಟೀ ಸ್ಪೂನ್, 1 ಟೀ ಸ್ಪೂನ್ ಪುದೀನಾ ಚಟ್ನಿ, ¼ ಕಪ್ ಟೊಮೆಟೊ ಸಣ್ಣಗೆ ಕತ್ತರಿಸಿದ್ದು, 1 ಟೇಬಲ್ ಸ್ಪೂನ್ ದಾಳಿಂಬೆ ಹಣ್ಣಿನ ಬೀಜ, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 1 ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸ, ಸ್ವಲ್ಪ ಉಪ್ಪು.

ಮೊದಲಿಗೆ ನೀರು, ಚಿಟಿಕೆ ಉಪ್ಪು ಹಾಕಿ,ಕಡಲೇಕಾಯಿಬೀಜವನ್ನು ಬೇಯಿಸಿಟ್ಟುಕೊಳ್ಳಿ. ಇದನ್ನು ಒಂದು ದೊಡ್ಡ ಬೌಲ್ ಗೆ ಹಾಕಿ. ಅದಕ್ಕೆ ಖಾರದಪುಡಿ, ಪುದೀನಾ ಚಟ್ನಿ, ಚಾಟ್ ಮಸಾಲಾ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಟೊಮೆಟೊ, ಈರುಳ್ಳಿ, ದಾಳಿಂಬೆ, ಲಿಂಬೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಚಾಟ್ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...