alex Certify ತೆಂಗಿನ ಹಾಲು ಹೀಗೆ ಬಳಸಿ ʼಆರೋಗ್ಯʼ ಸಮಸ್ಯೆ ನಿವಾರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಂಗಿನ ಹಾಲು ಹೀಗೆ ಬಳಸಿ ʼಆರೋಗ್ಯʼ ಸಮಸ್ಯೆ ನಿವಾರಿಸಿ

ತೆಂಗಿನ ಹಾಲನ್ನು ಹೆಚ್ಚಾಗಿ ವಿಧವಿಧವಾದ ಅಡುಗೆಗಳನ್ನು ತಯಾರಿಸಲು ಬಳಸುತ್ತಾರೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ.

*ತೆಂಗಿನ ಹಾಲನ್ನು ಸೇವಿಸುವುದರಿಂದ ಅತಿಯಾಗಿ ತಿನ್ನಬೇಕು ಎನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಇದರಿಂದ ಬೊಜ್ಜು ಕಡಿಮೆಯಾಗುತ್ತದೆ.

*ದೇಹದ ಉಷ್ಣತೆಯಿಂದ ಬಾಯಿಯಲ್ಲಿ ಗುಳ್ಳೆಗಳಾಗಿದ್ದರೆ ತೆಂಗಿನ ಹಾಲನ್ನು ಸೇವಿಸಿ. ಇದರಿಂದ ಗುಳ್ಳೆಗಳು ನಿವಾರಣೆಯಾಗುತ್ತದೆ.

*ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗ ಅಪಾಯದಿಂದ ದೂರವಿರಿಸುತ್ತದೆ.

*ತೆಂಗಿನ ಹಾಲನ್ನು ಬಳಸುವುದರಿಂದ ಚರ್ಮ ಮೃದುವಾಗುತ್ತದೆ. ವಯಸ್ಸಾದ ಸಮಸ್ಯೆಗಳು ಕಾಡುವುದಿಲ್ಲ, ಹಾಗೇ ತಲೆಹೊಟ್ಟು, ತುರಿಕೆ ಸಮಸ್ಯೆಯನ್ನು ದೂರಮಾಡಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...