alex Certify ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ…!

ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕೋಟಿಗಟ್ಟಲೆ ಹಣ, ಜಮೀನು, ಮನೆ, ನಿವೇಶನಗಳು ಪತ್ತೆಯಾಗುತ್ತಿದ್ದುದನ್ನು ಈವರೆಗೂ ಕೇಳಿದ್ದೆವು. ಇದೀಗ ಮಧ್ಯಪ್ರದೇಶದ ಮಹಿಳಾ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತದವರು ದಂಗಾಗಿದ್ದಾರೆ.

ಕೇವಲ ಹತ್ತು ವರ್ಷಗಳ ಹಿಂದಷ್ಟೇ ಮಧ್ಯಪ್ರದೇಶ ಪೊಲೀಸ್ ವಸತಿ ನಿಗಮ ಮಂಡಳಿಯ ಉಸ್ತುವಾರಿ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡಿದ್ದ ಹೇಮಾ ಮೀನಾ ಅವರು ತಿಂಗಳಿಗೆ ಪಡೆಯುತ್ತಿದ್ದ ಸಂಬಳ 30 ಸಾವಿರ ರೂಪಾಯಿ. ಆದರೆ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಏಳು ಕೋಟಿ ರೂಪಾಯಿ ಸಂಪಾದಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಐದಾರು ಐಷಾರಾಮಿ ಕಾರುಗಳು ಸೇರಿದಂತೆ ಒಟ್ಟು 20 ವಾಹನಗಳು, 20,000 ಚದರಡಿಗಳಷ್ಟು ಭೂಮಿ, 12ಕ್ಕೂ ಅಧಿಕ ಗಿರ್ ತಳಿಯ ಹಸುಗಳು, ವಿದೇಶಿ ತಳಿ ಸೇರಿದಂತೆ ನೂರಕ್ಕೂ ಹೆಚ್ಚು ಶ್ವಾನಗಳು, 98 ಇಂಚಿನ ದೊಡ್ಡ ಟಿವಿ ಮೊದಲಾದವು ಪತ್ತೆಯಾಗಿದ್ದು, ಇನ್ನೂ ಕೂಡ ಆಕೆಯ ಆಸ್ತಿಯ ಮಾಹಿತಿ ಕಲೆ ಹಾಕಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...